Home » ಲವ್ ಜಿಹಾದ್‌ಗೆ ಕಡಿವಾಣ ಹಾಕಲು ಮಹಾ ಕಾನೂನು
 

ಲವ್ ಜಿಹಾದ್‌ಗೆ ಕಡಿವಾಣ ಹಾಕಲು ಮಹಾ ಕಾನೂನು

by Kundapur Xpress
Spread the love

ಮುಂಬೈ : ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ-ಎನ್‌ಡಿಎ ಸರ್ಕಾರ ಮುಂದಾಗಿದ್ದು, ಈ ಕುರಿತು ಕಾನೂನು ರೂಪಿಸುವುದು ಹಾಗೂ ಕಾನೂನು ಮತ್ತು ತಾಂತ್ರಿಕ ಸಮಸ್ಯೆಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲು ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಏಳು ಸದಸ್ಯರ ಸಮಿತಿ ಅಧ್ಯಕ್ಷತೆಯನ್ನು ಡಿಜಿಪಿ ವಹಿಸಲಿದ್ದಾರೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಾನೂನು ಮತ್ತು ನ್ಯಾಯಾಂಗ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಇಲಾಖೆ ಮತ್ತು ಗೃಹ ಇಲಾಖೆಯ ಅಧಿಕಾರಿಗಳು ಇತರ ಆರು ಸದಸ್ಯರಾಗಿರುತ್ತಾರೆ.

ಈ ಅಧಿಸೂಚನೆಗೆ ಗೃಹ ಇಲಾಖೆಯ ಉಪ ಕಾರ್ಯದರ್ಶಿ ಹೇಮಂತ್ ಮಹಾಜನ್ ಸಹಿ ಹಾಕಿದ್ದಾರೆ. ದಿಲ್ಲಿಯಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ನಡುವಿನ ಸಭೆಯ ಬಳಿಕ ಈ ಬೆಳವಣಿಗೆ ನಡೆದಿದೆ.

 

Related Articles

error: Content is protected !!