102
ನ್ಯೂಯಾರ್ಕ್ : ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಕದನ ವಿರಾಮ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆ ತಳ್ಳಿ ಹಾಕಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಕದನ ವಿರಾಮಕ್ಕೂ ವ್ಯಾಪಾರ ಒಪ್ಪಂದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಮಾದ್ಯಮವೊಂದರ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಎಸ್. ಜೈಶಂಕರ್, ಮೇ 9ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ದೂರವಾಣಿ ಮೂಲಕ ಮಾತನಾಡಿದ್ದ ವೇಳೆ ನಾನು ಪ್ರಧಾನಿ ಕೊಠಡಿಯಲ್ಲಿದ್ದೆ. ಭಾರತದ ಮೇಲೆ ಪಾಕ್ ದೊಡ್ಡ ದಾಳಿ ನಡೆಸಲಿದೆ ಎಂದು ವ್ಯಾನ್ಸ್ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಅವರು ಹೇಳಿದ ಕೆಲವು ವಿಚಾರಗಳನ್ನು ನಾವು ಒಪ್ಪಿಕೊಂಡಿಲ್ಲ. ಪಾಕಿಸ್ತಾನಿಗಳ ಬೆದರಿಕೆಯಿಂದ ನಮ್ಮ ಪ್ರಧಾನಿ ನಿಲುವು ಬದಲಾಗಿಲ್ಲ. ಪಾಕಿಸ್ತಾನ ದಾಳಿ ನಡೆಸಿದರೆ ನಾವು ತೀಕ್ಷ್ಮವಾದ ಪ್ರತಿದಾಳಿ ನಡೆಸುತ್ತೇವೆಂದು ಪ್ರಧಾನಿ ಮೋದಿ ತಿಳಿಸಿದ್ದರು ಎಂದು ಜೈಶಂಕರ್ ಹೇಳಿದ್ದಾರೆ.

