Home » ಮಾಲೆಗಾಂವ್ ಕೇಸ್‌ : ಭಾಗ್ವತ್‌ ಬಂಧನಕ್ಕೆ ಒತ್ತಡ
 

ಮಾಲೆಗಾಂವ್ ಕೇಸ್‌ : ಭಾಗ್ವತ್‌ ಬಂಧನಕ್ಕೆ ಒತ್ತಡ

ನಿವೃತ್ತ ಎಟಿಎಸ್‌ ಅಧಿಕಾರಿ - ಮೆಹಮೂದ್ ಮುಜಾವರ್

by Kundapur Xpress
Spread the love

ಹೊಸದಿಲ್ಲಿ : ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರ್‌ಎಸ್ಎಸ್ ಸರಸಂಘಚಾಲಕ್ ಡಾ.ಮೋಹನ್ ಭಾಗ್ವತ್ ಅವರ ಬಂಧನಕ್ಕೆ ಸೂಚನೆ ಇತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಎಟಿಎಸ್ ನಿವೃತ್ತ ಅಧಿಕಾರಿ ಮೆಹಮೂದ್ ಮುಜಾವ‌ರ್ ಸ್ಫೋಟಕ ಸತ್ಯ ಬಾಯ್ದಿಟ್ಟಿದ್ದಾರೆ.

ಭಾಗ್ವತ್ ಅವರನ್ನು ಬಂಧಿಸಲು ನಿರಾಕರಿಸಿದ್ದಕ್ಕೆ, ಆಗಿನ ಪೊಲೀಸ್ ಆಯುಕ್ತ ಪರಂವೀರ್ ಸಿಂಗ್ ನನ್ನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದರು. ನಾನು ಕೇಸರಿ ಭಯೋತ್ಪಾದನೆ ಎಂಬ ಮಿಥೈ ಬಗ್ಗೆ ತನಿಖೆಗೂ ಒಪ್ಪಿರಲಿಲ್ಲ ಎಂದು ನಿವೃತ್ತ ಅಧಿಕಾರಿ ಹೇಳಿದ್ದಾರೆ.

ಬಿಜೆಪಿ ಮಾಜಿ ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆ.ಕರ್ನಲ್ ಪ್ರಸಾದ್ ಪುರೋಹಿತ್, ಮೋಹನ್ ಭಾಗ್ವತ್ ಅವರ ವಿರುದ್ಧ ಸ್ಫೋಟದ ಆರೋಪ ಹೊರಿಸಬೇಕು, ಸಾಕ್ಷ್ಯಗಳನ್ನು ತಿರುಚುವಂತೆಯೂ ಒತ್ತಡ ಹಾಕಿದ್ದರು. ಆದರೆ, ನಾನು ಯಾವುದಕ್ಕೂ ಒಪ್ಪಿರಲಿಲ್ಲ. ಯಾಕೆಂದರೆ ಹಿಂದು ಭಯೋತ್ಪಾದನೆ ಎಂಬುದು ನಮ್ಮ ರಕ್ತದಲ್ಲೇ ಇಲ್ಲ ಎಲ್ಲರಿಗೂ ಗೊತ್ತಿರುವ ಸತ್ಯವಿದು ಎಂದಿದ್ದಾರೆ.

 

Related Articles

error: Content is protected !!