Home » ರೈಲಿನಿಂದ ಕೆಳಗೆ ಬಿದ್ದು ಐವರ ಮೃತ್ಯು
 

ರೈಲಿನಿಂದ ಕೆಳಗೆ ಬಿದ್ದು ಐವರ ಮೃತ್ಯು

by Kundapur Xpress
Spread the love

ಮುಂಬೈ : ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಜನದಟ್ಟಣೆಯಿಂದ ಕೂಡಿದ್ದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಲೋಕಲ್ ರೈಲಿನಲ್ಲಿ ಅತೀವ ನೂಕು ನುಗ್ಗಲು ಉಂಟಾಗಿ, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಐವರು ಸಾವನ್ನಪ್ಪಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ

ಮುಂಬೈನ ದಿವಾ ಮತ್ತು ಕೋಪ‌ರ್ ರೈಲು ನಿಲ್ದಾಣಗಳ ನಡುವಿನ ಮುಂಬ್ರಾ ಬಳಿ ರೈಲು ಸಾಗುತ್ತಿದ್ದಾಗ ಬೆಳಗ್ಗೆ9.30ಕ್ಕೆ ಅನಾಹುತ ಸಂಭವಿಸಿದೆ. ಆ ಸಮಯದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಹೀಗಾಗಿ ಜನರು ರೈಲಿನ ಬಾಗಿಲಿಗೆ ನೇತಾಡಿಕೊಂಡು ಚಲಿಸುತ್ತಿದ್ದರು. ಈ ಸಂದರ್ಭದಲ್ಲಿ ರೈಲು ಚಲಿಸುವಾಗಲೇ ಉಂಟಾದ ನೂಕು ನುಗ್ಗಲಿನಿಂದ ಸುಮಾರು 10 ಮಂದಿ ಪ್ರಯಾಣಿಕರು ಕೆಳಗ್ಗೆ ಬಿದ್ದಿದ್ದಾರೆ. ಕಾವಲುಗಾರರೊಬ್ಬರು ಗಮನಿಸಿದಾಗ ಅಪಘಾತದ ವಿಚಾರ ಬೆಳಕಿಗೆ ಬಂದಿದೆ.

ಆರಂಭದಲ್ಲಿ ರೈಲು ಹಳಿ ಮೇಲೆ ಬಿದ್ದವರು ಪುಷ್ಪಕ್ ಎಕ್ ಪ್ರೆಸ್‌ ರೈಲಿನಿಂದ ಬಿದ್ದವರು ಎಂದು ಹೇಳಲಾಗಿತ್ತು. ಆ ಬಳಿಕ ಅದು ಥಾಣೆಯಿಂದ ಮುಂಬೈನ ಸಿಎಸ್‌ಟಿ ಕಡೆಗೆ ತೆರಳುತ್ತಿದ್ದ ಲೋಕಲ್ ರೈಲಿನಿಂದ ಕೆಳಗೆ ಬಿದ್ದಿರುವ ವಿಚಾರ ಬಯಲಾಗಿದೆ.

 

Related Articles

error: Content is protected !!