ಪುರಿ : ಭಗವಾನ್ ಜಗನ್ನಾಥನ ವಾರ್ಷಿಕ ರಥಯಾತ್ರೆಯು ಒಡಿಶಾದ ಕಡಲತೀರದ ಯಾತ್ರಿಕ ಪಟ್ಟಣವಾದ ಪುರಿಯಲ್ಲಿ ಭಾನುವಾರ ಸಂಜೆ ಆರಂಭವಾಯಿತು. ಸಾವಿರಾರು ಭಕ್ತರು ರಥವನ್ನು ಮುಂದಕ್ಕೆ ಎಳೆಯುವ ಮೂಲಕ ಜಗನ್ನಾಥನ ಕೃಪೆಗೆ ಪಾತ್ರರಾದರು. ಅಂತೆಯೇ ಎರಡು ದಿನ ಉತ್ಸವ ನಡೆಯುತ್ತಿರುವುದು ವಿಶೇಷವಾಗಿದೆ
ರಾಷ್ಟ್ರಪತಿ ದೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಥಯಾತ್ರೆಯಲ್ಲಿ ಪಾಲ್ಗೊಂಡು ಜಗನ್ನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಮೋಹನ್ ಮಾಝಿ ನೇತೃತ್ವದ ಒಡಿಶಾ ಸರ್ಕಾರ ದೌಪದಿ ಮುರ್ಮು, ಅಮಿತ್ ಶಾ ಭೇಟಿಗೆ ವಿಶೇಷ ವ್ಯವಸ್ಥೆ ಮಾಡಿತ್ತು. ಸಾಮಾನ್ಯವಾಗಿ ಒಂದೇ ದಿನ ಆಯೋಜಿಸಲಾಗುವ ರಥಯಾತ್ರೆ ಈ ವರ್ಷ ಕೆಲವು ವಿಚಾರಗಳಿಗಾಗಿ ಎರಡು ದಿನಗಳ ಕಾಲ ನಡೆಯಲಿದೆ. ಸಂಪ್ರದಾಯಕ್ಕೆ ಹೊರತಾಗಿ, ಹಬ್ಬಕ್ಕೆ ಸಂಬಂಧಿಸಿದ ಕೆಲವು ಆಚರಣೆಗಳು ಒಂದೇ ದಿನದಲ್ಲಿ ನಡೆಯಲಿದ್ದು ಲಕ್ಷಾಂತರ ಮಂದಿ ಭಕ್ತರು ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ