ನವದೆಹಲಿ: 10 ವರ್ಷಗಳ ಬಳಿಕ ಪಕ್ಷಕ್ಕೆ ಒಲಿದು ಬಂದಿರುವ ಲೋಕಸಭೆಯಲ್ಲಿನ ವಿಪಕ್ಷ ನಾಯಕನ ಸ್ಥಾನ ವಹಿಸಿಕೊಳ್ಳುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ ಒಕ್ಕೊರಲ ಮನವಿ ಮಾಡಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ಮತ್ತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶನಿವಾರ ಇಲ್ಲಿ ಸಭೆಸೇರಿದ್ದ ಕಾರ್ಯಕಾರಿ ಸಮಿತಿ ಇಂಥದ್ದೊಂದು ಮನವಿ ಮಾಡಿದೆ
ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್, ‘ಲೋಕಸಭೆಯ ವಿಪಕ್ಷ ನಾಯಕ ಸ್ಥಾನ ವಹಿಸಿಕೊಳ್ಳುವಂತೆ ಸಭೆ ರಾಹುಲ್ ಅವರನ್ನು ಸರ್ವಾನುಮತದಿಂದ ಮನವಿ ಮಾಡಿತು. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ರಾಹುಲ್ ಸಭೆಗೆ ತಿಳಿಸಿದರು’ ಎಂದರು. ಇದೇ ವೇಳೆ ರಾಹುಲ್ ಒಪ್ಪದಿದ್ದರೆ ಶಶಿ ತರೂರ್ ಆಗಬಹುದು ఎంబ ಊಹಾಪೋಹಗಳು ಇವೆ.