36
ಚೆನ್ನೈ : ಸದಾ ಚೈತನ್ಯದಿಂದ, ಧನಾತ್ಮಕತೆಯಿಂದಿರುವ ಸೂಪರ್‌ಸ್ಟಾರ್ ರಜನೀಕಾಂತ್ ತಮ್ಮ ಎನರ್ಜಿಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಕಳೆದ 2 ದಶಕದಿಂದ ನಡೆಸಿಕೊಂಡು ಬರುತ್ತಿರುವ ಕರ್ಮಯೋಗವೇ ತಮ್ಮ ಧನಾತ್ಮಕತೆಯ ರಹಸ್ಯ ಎಂದು ಹೇಳಿದ್ದಾರೆ
ರಾಂಚಿಯ ವೈಎಸ್‌ಎಸ್ ಆಶ್ರಮದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ರಜನಿ, ನನ್ನನ್ನು ಭೇಟಿಯಾದವರು ಧನಾತ್ಮಕ ಶಕ್ತಿ ದೊರೆಯುತ್ತದೆ ಎನ್ನುತ್ತಾರೆ ಅದರ ರಹಸ್ಯವೆಂದರೆ ನಾನು ಕ್ರಿಯಾಯೋ ಗವನ್ನು ಅಭ್ಯಾಸ ಮಾಡುತ್ತೇನೆ. ಕ್ರಿಯಾ ಅಭ್ಯಾಸವನ್ನು ಪ್ರಾರಂಭಿಸಿದಾಗಿನಿಂದ, ನನ್ನೊಳಗೆ ಬದಲಾವಣೆ ಸಂಭವಿಸಿತು. ಅದನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ ಅದೊಂದು ರೀತಿಯ ಮೌನ ಎಂದಿದ್ದಾರೆ.