175
ಮಾಸ್ಕೊ : ರಷ್ಯಾದಿಂದ ಭಾರತದ ತೈಲ ಆಮದನ್ನು ವಿರೋಧಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಯಾಡಿಮಿರ್‌ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.
ಆದರೆ ಪುಟಿನ್ ಆಗಮನದ ನಿಖರ ದಿನಾಂಕವನ್ನು ತಿಳಿಸಿಲ್ಲ. ಪ್ರಸ್ತುತ ರಷ್ಯಾ ಪ್ರವಾಸದಲ್ಲಿರುವ ದೋವಲ್, ‘ನಾವು ವಿಶೇಷವಾದ, ದೀರ್ಘವಾದ ಸಂಬಂಧ ಹೊಂದಿದ್ದೇವೆ ಹಾಗೂ ಈ ಸಂಬಂಧವನ್ನು ಗೌರವಿಸುತ್ತೇವೆ. ಇದರಿಂದ ಗಣನೀಯ ಕೊಡುಗೆಗಳೂ ಸಿಕ್ಕಿವೆ. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿಯಲು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಸಂತೋಷಪಡುತ್ತೇವೆ. ದಿನಾಂಕಗಳನ್ನು ಈಗ ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

