ಕೋಟಾ : ರಾಜಸ್ಥಾನದ ಕೋಟಾದಲ್ಲಿ ನಡೆದ ಪುಲ್ವಾಮಾ ದಾಳೆಯಲ್ಲಿ ವೀರಗತಿಯಾದ ಯೋಧರೊಬ್ಬರ ಮಗಳ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಲೋಕಸಭಾ ಸ್ಪೀಕರ್ ಓಂ ಬೆರ್ಲಾ ಅವರು ಆರು ವರ್ಷಗಳ ಹಿಂದೆ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ಆ ಮೂಲಕ ದೇಶಕ್ಕಾಗಿ ಪ್ರಾಣ ಬಲಿದಾನ ನೀಡಿದ ಯೋಧರನ್ನು ದೇಶ ಸದಾ ಸ್ಮರಿಸುತ್ತದೆ ಎಂಬ ಸಂದೇಶ ಸಾರಿದ್ದಾರೆ.
ಕೋಟಾ-ಬುಂಡಿಯ ಸಂಸದರೂ ಆಗಿರುವ ಬಿರ್ಲಾ ಸಂಗೋಡ್ ಗ್ರಾಮದಲ್ಲಿ ನಡೆದ ವಿವಾಹದಲ್ಲಿ ಪಾಲ್ಗೊಂಡು ಭಾತ್ ಸಾಂಪ್ರದಾಯಿಕ ವಿವಾಹ ಆಚರಣೆ ನೆರವೇರಿಸಿದ್ದಾರೆ
2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ವೀರಗತಿ ಹೊಂದಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಯೋಧ ದಿವಂಗತ ಹೇಮರಾಜ್ ಅವರ ಪುತ್ರಿ 25 ವರ್ಷದ ರೀನಾ ಮೀನಾಗೆ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡುವ ಮೂಲಕ ಬಿರ್ಲಾ ಆರು ವರ್ಷಗಳ ಹಿಂದೆ ನೀಡಿದ ಮಾತಿಗೆ ಬದ್ಧರಾದರು. ಬಿರ್ಲಾ ಅವರು ದಿವಂಗತ ಯೋಧನ ಪತ್ನಿ ಮಧುಬಾಲಾ ಅವರಿಗೆ ಉಡುಗೊರೆ ನೀಡಿದರು. ಇದಕ್ಕೆ ಪ್ರತಿಯಾಗಿ ಮಧುಬಾಲಾ ಅವರು, ಬಿರ್ಲಾ ಅವರಿಗೆ ಸಾಂಪ್ರದಾಯಿಕ ತಿಲಕವಿರಿಸಿ ಆರತಿ ಬೆಳಗಿದ್ದಾರೆ

