103
ನವದೆಹಲಿ : ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜ್ಯೋತಿ ಮಲ್ಲೊತ್ರಾಗೆ ಪಾಕಿಸ್ತಾನದಲ್ಲಿ 6 ಗನ್‌ಮ್ಯಾನ್‌ಗಳಿಂದ ಭಾರೀ ಭದ್ರತೆ ನೀಡಲಾಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಸ್ಕಾಟ್ಲಂಡ್‌ನ ಯೂಟ್ಯೂಬರ್ ಕ್ಯಾಲಮ್ ಮಿಲ್ ಅವರ ವಿಡಿಯೋದಿಂದ ಈ ವಿಷಯ ಬಹಿರಂಗವಾಗಿದೆ. ‘ಕ್ಯಾಲಮ್ ಅಬ್ರಾಡ್’ ಹೆಸರಿನ ಚಾನೆಲ್‌ನಲ್ಲಿ ಮಿಲ್ ತಮ್ಮ ಪಾಕಿಸ್ತಾನ ಪ್ರವಾಸದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಲಾಹೋರ್‌ನ ಅನಾರ್ಕಲಿ ಬಜಾರ್‌ನಲ್ಲಿ ಕ್ಯಾಲಮ್ ಮಿಲ್ ಸುತ್ತಾಡುತ್ತಿದ್ದಾಗ ಜ್ಯೋತಿ ಎದುರಾಗಿದ್ದಾಳೆ. ಈ ವೇಳೆ – ಇಬ್ಬರ ನಡುವೆ ಸಣ್ಣ ಮಾತುಕತೆ ನಡೆದಿದೆ. ವಿಡಿಯೋದಲ್ಲಿ ಜ್ಯೋತಿಯನ್ನು 6 ಮಂದಿ ಶಸ್ತ್ರಸಜ್ಜಿತ ವ್ಯಕ್ತಿಗಳು ಸುತ್ತುವರೆದಿರುವುದು ಈ ಮೂಲಕ ಬಹಿರಂಗವಾಗಿದೆ

