129
ಪೋರ್ಟ್ ಲೂಯಿಸ್ : 10 ವರ್ಷಗಳ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ಗೆ ನೀಡಿದ ಭೇಟಿಯ ಬಗ್ಗೆ ಮಾತನಾಡಿದ ಅಲ್ಲಿನ ಆರೋಗ್ಯ ಸಚಿವ ಕುಮಾರ್ ಬಚೂ, ಮೋದಿ ಅವರು ಮಾರಿಷಸ್ ನೆಲಕ್ಕೆ ಕಾಲಿಡುತ್ತಿದ್ದಂತೆ ಮಳೆ ಶುರುವಾಯಿತು. ಬಹಳ ದಿನಗಳಿಂದ ಬರದ ಮಳೆ ಏಕಾಏಕಿ ಸುರಿಯತೊಡಗಿತು ಎಂದಿದ್ದಾರೆ.
ಉಭಯ ದೇಶಗಳ ಸಂಬಂಧದ ಬಗ್ಗೆ ಮಾತನಾಡಿದ ಅವರು, ಹಲವು ದೇಶಗಳ ಪ್ರಧಾನಿಗಳು ಇಲ್ಲಿಗೆ ಬರುತ್ತಾರಾದರೂ ಮೋದಿ ಭೇಟಿ ಐತಿಹಾಸಿಕ, ಭಾರತ ಸೀನಿದರೆ ಮಾರಿಷಸ್ ಗೆ ಶೀತವಾಗುತ್ತದೆ. ಇಂತಿರುವ ನಮ್ಮ ಬಾಂಧವ್ಯ ಬೆಳೆಯುತ್ತಾ ಹೋಗಲಿ’ ಎಂದು ಹಾರೈಸಿದರು.

