Home » ಸಕ್ರಿಯ ನಕ್ಸಲ್ ಸದಸ್ಯ ಮನೀಶ್ ಎನ್‌ಕೌಂಟರ್
 

ಸಕ್ರಿಯ ನಕ್ಸಲ್ ಸದಸ್ಯ ಮನೀಶ್ ಎನ್‌ಕೌಂಟರ್

ಮನೀಶ್ ತಲೆಗೆ 5 ಕೋಟಿ ರೂ. ಬಹುಮಾನ

by Kundapur Xpress
Spread the love

ಲಾತೇಹಾರ್ (ಜಾರ್ಖಂಡ್) : ಜಿಲ್ಲೆಯಲ್ಲಿ ಸೋಮವಾರ ನಸುಕಿನ ಹೊತ್ತಿನಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆಯಲ್ಲಿ ನಿಷೇಧಿತ ಸಿಪಿಐ (ಮಾವೋಯಿಸ್ಟ್‌) ಸದಸ್ಯ ಮನೀಶ್ ಯಾದವ್ ನನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದು, ಅಪರೇಷನ್ ನಲ್ಲಿ ಇನ್ನೋರ್ವ ನಿಷೇಧಿತ ಮಾವೋ ಕಮ್ಯೂನಿಸ್ಟ್‌ ಸದಸ್ಯನ ಬಂಧಿಸಿದ್ದೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನೇತಾರ್ ಹಾಟ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ದೌನಾ ಅರಣ್ಯ ಪ್ರದೇಶದಲ್ಲಿ ಸೋಮವಾರ ರಕ್ಷಣಾ ಪಡೆ ಎನ್‌ಕೌಂಟರ್ ನಡೆಸಿದೆ. ನಕ್ಸಲ್ ಸದಸ್ಯ ಮನೀಶ್ ತಲೆಗೆ 5 ಕೋಟಿ ರೂ. ಬಹುಮಾನ ಘೋಷಣೆಯಾಗಿದ್ದು, ರಕ್ಷಣಾ ಪಡೆ ವಿರುದ್ಧ ಗನ್ ದಾಳಿ ನಡೆಸುವ ವೇಳೆ ಹತನಾಗಿದ್ದಾನೆ. 10 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ ಇನ್ನೋರ್ವ ನಕ್ಸಲ್ ಕುಂದನ್ ಸಿಂಗ್ ಖಾರ್ವರ್ ಅನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಉನ್ನತಾಧಿಕಾರಿ ತಿಳಿಸಿದ್ದಾರೆ.

ಎರಡು ಎಕ್ಸ್-95 ಸ್ವಯಂಚಾಲಿತ ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಲಾಗಿದೆ. ಮನೀಶ್ ಮತ್ತು ಕುಂದನ್ ಇಬ್ಬರೂ ಕಳೆದ 12 ವರ್ಷಗಳಿಂದ ನಿಷೇಧಿತ ಸಿಪಿಐ (ಮಾವೋಯಿಸ್ಟ್) ನಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿದ್ದರು. ಮನೀಶ್ ವಿರುದ್ಧ 40 ಪ್ರಕರಣಗಳು ಮತ್ತು ಕುಂದನ್ ವಿರುದ್ದ 27 ಪ್ರಕರಣಗಳು ದಾಖಲಾಗಿದ್ದವು.

 

Related Articles

error: Content is protected !!