91
ಹೊಸದಿಲ್ಲಿ : ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಭಾರತದ ವಿರುದ್ಧ ಮತ್ತಷ್ಟು ಟ್ಯಾರಿಫ್ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತದ ವಿದೇಶಾಂಗ ಇಲಾಖೆ, ಇದು ಅನ್ಯಾಯ ಮತ್ತು ಅಸಮಂಜಸ ನಡೆ ಎಂದಿದೆ. ಟ್ರಂಪ್ ತೈಲ ಬೆದರಿಕೆ ಸಂಬಂಧ ಹೇಳಿಕೆ ನೀಡಿರುವ ಅದು, ನೀವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿಲ್ಲವೇ ಎಂದು ಪ್ರಶ್ನಿಸಿದೆ. 2024ರಲ್ಲಿ ಐರೋಪ್ಯ ದೇಶಗಳು 67 ಬಿಲಿಯನ್ ಯುರೋನಷ್ಟು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿವೆ. ನಾವು ರಷ್ಯಾದಿಂದ ತೈಲ ತರಿಸಿಕೊಂಡ ಮಾತ್ರಕ್ಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದೆ.

