Home » ಖಾಸಗಿ ವಿಮಾನ ತಯಾರಿಕ ಘಟಕ ಉದ್ಘಾಟನೆ
 

ಖಾಸಗಿ ವಿಮಾನ ತಯಾರಿಕ ಘಟಕ ಉದ್ಘಾಟನೆ

ಮೋದಿ ಸ್ಪೇನ್‌ ಪ್ರಧಾನಿ ಚಾಲನೆ

by Kundapur Xpress
Spread the love

ವಡೋದರಾ : ಗುಜರಾತ್‌ನ ವಡೋದರಾ ನಗರದಲ್ಲಿ ಟಾಟಾ ಏರ್ ಬಸ್ ತಯಾರಿಕಾ ಘಟಕವನ್ನು ನಿನ್ನೆ ಸೋಮವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಟ್ರೊ ಸ್ಯಾಂಚೆಜ್ ಅವರು ಉದ್ಘಾಟಿಸಿದರು. ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಲಿಮಿಟೆಡ್ ಕ್ಯಾಂಪಸ್‌ನಲ್ಲಿ ಸಿ-295 ವಿಮಾನ ತಯಾರಿಕಾ ಸಂಕೀರ್ಣವನ್ನು ಸ್ಥಾಪಿಸಲಾಗಿದ್ದು, ಇದು ಭಾರತದ ಮೊದಲ ಖಾಸಗಿ ವಿಮಾನ ತಯಾರಿಕಾ ಸಂಕೀರ್ಣವಾಗಿದೆ. ಈ ವೇಳೆ ಮಾತನಾಡಿದ ಮೋದಿ, ಸಿ-295 ಸೌಲಭ್ಯ ನವ ಭಾರತದ ಕೆಲಸದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ

ನಾನು ಗುಜರಾತ್ ಸಿಎಂ ಆಗಿದ್ದಾಗ ವಡೋದರಾದಲ್ಲಿ ರೈಲು ಬೋಗಿಗಳ ತಯಾರಿಕೆ ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಲಾಗಿತ್ತು ಇಂದು ನಾವು ಆ ಕಾರ್ಖಾನೆಯಲ್ಲಿ ತಯಾರಿಸಿದ ಮೆಟ್ರೊ ಕೋಚ್‌ ಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ.ಭವಿಷ್ಯದಲ್ಲಿ ಇಲ್ಲಿನ ಕಾರ್ಖಾನೆಯಲ್ಲಿ ತಯಾರಾದ ವಿಮಾನಗಳನ್ನು ಇತರ ದೇಶಗಳಿಗೂ ರಫ್ತು ಮಾಡುವ ವಿಶ್ವಾಸವಿದೆ ಎಂದರು

ಸ್ಪೇನ್ ಪ್ರಧಾನಿ ಪೆಟ್ರೋ ಸ್ಯಾಂಚೆಜ್ ಮಾತನಾಡಿ, ಹೊಸ ಕೈಗಾರಿಕಾ ತಾಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಟಾಟಾ ಸಮೂಹವನ್ನು ‘ದೈತ್ಯರಲ್ಲಿ ದೈತ್ಯ’ ಎಂದು ಗುಣಗಾನ ಮಾಡಿದರು. ಇಂದು ನಾವು ಅತ್ಯಾಧುನಿಕ ಕೈಗಾರಿಕಾ ಸೌಕರ್ಯವನ್ನು ಮಾತ್ರ ಅಧಿಕೃತವಾಗಿ ಉದ್ಘಾಟಿಸುತ್ತಿಲ್ಲ. ಏರ್‌ಬಸ್ ಮತ್ತು ಟಾಟಾ ನಡುವಿನ ಈ ಪಾಲುದಾರಿಕೆಯು ಭಾರತೀಯ ಏರೋಸ್ಪೇಸ್ ಉದ್ಯಮದ ಪ್ರಗತಿಗೆ ಕೊಡುಗೆ ನೀಡಲಿದೆ. ಅಲ್ಲದೇ ಇತರ ಯುರೋಪಿಯನ್ ಕಂಪನಿಗಳ ಆಗಮನಕ್ಕೆ ಹೊಸ ಬಾಗಿಲು ತೆರೆಯುತ್ತದೆ ಎಂದರು.

   

Related Articles

error: Content is protected !!