161
ಶ್ರೀನಗರ : ಪಹಲ್ಗಾಮ್ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಕಠಿಣ ಕ್ರಮ ಮುಂದುವರೆಸಿರುವ ಸೇನಾ ಪಡೆಗಳು ಮತ್ತೆ ನಾಲ್ಕು ಉಗ್ರರ ಮನೆಗೆಗಳನ್ನು ಧ್ವಂಸ ಮಾಡಿವೆ. ಇದರೊಂದಿಗೆ 26 ಪ್ರವಾಸಿಗರ ಹತ್ಯೆ ನಡೆದ ಮೂರು ದಿನಗಳಲ್ಲಿ ಒಟ್ಟು ಆರು ಉಗ್ರರ ಮನೆಗಳನ್ನು ಧ್ವಂಸ ಮಾಡಿದಂತಾಗಿದೆ. ಜೊತೆಗೆ ಉಗ್ರರಿಗಾಗಿ ಮನೆ ಮನೆ ಹುಡುಕಾಟದ ಶನಿವಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಅಲ್ಲದೆ ಉಗ್ರರ ಬೆಂಬಲಿಗರು ಮತ್ತು ಅವರಿಗೆ ನೆರವು ನೀಡುವವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಹಲವಾರು ಜನರನ್ನು ವಶಕ್ಕೆ ಪಡೆದಿದ್ದು, ಅವರನ್ನು ಭಯೋತ್ಪಾದಕರು ಮತ್ತು ಅವರಿಗೆ ಪ್ರೋತ್ಸಾಹ ನೀಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಕಠಿಣ ಸಂದೇಶ ರವಾನಿಸಿದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಇಂಥ ಘಟನೆಗಳು ಆರಂಭವಾಗಿವೆ.

