Home » ಯಾರ ಮಡಿಲಿಗೆ ದೆಹಲಿ ಗದ್ದುಗೆ
 

ಯಾರ ಮಡಿಲಿಗೆ ದೆಹಲಿ ಗದ್ದುಗೆ

ಬೆಳಿಗ್ಗೆ 8.00ರಿಂದ ಮತೆಣಿಕೆ

by Kundapur Xpress
Spread the love

ನವದೆಹಲಿ : ಫೆ.5ರಂದು 70 ಕ್ಷೇತ್ರಗಳ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಶನಿವಾರ ಹೊರಬೀ ಳಲಿದೆ. ಇದರೊಂದಿಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಮತ್ತು ಒಂದೊಂದೇ ರಾಜ್ಯಗಳಲ್ಲಿ ತನ್ನ ಹಿಡಿತ ಸಾಧಿಸಲು ಹಂಬಲಿಸುತ್ತಿರುವ ಆಡಳಿತಾ ರೂಢ ಆಮ್ ಆದ್ಮಿ ಪಕ್ಷದ ಜಿದ್ದಾಜಿದ್ದಿಗೆ ತೆರೆ ಬೀಳಲಿದೆ.

ಒಂದೊಮ್ಮೆ ಬಿಜೆಪಿ ಬಹುಮತ ಪಡೆದರೆ ಬರೋಬ್ಬರಿ 27 ವರ್ಷಗಳ ನಂತರ ದೆಹಲಿಯ ಗದ್ದುಗೆಗೇರಿದಂತಾಗುತ್ತದೆ. ಹೀಗಾದಲ್ಲಿ ಆಪ್‌ನ 10 ವರ್ಷಗಳ ಆಡಳಿತ ಅಂತ್ಯವಾಗಲಿದೆ ಜೊತೆಗೆ ಆಪ್ ಆಡಳಿತ ಪಂಜಾಬ್‌ಗೆ ಮಾತ್ರ ಸೀಮಿತವಾಗಿರಲಿದೆ. ಬೆಳಗ್ಗೆ 8.00 ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾ ಹ್ನದ ವೇಳೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.

2020ರಲ್ಲಿ ನಡೆದ ಚುನಾವಣೆಯಲ್ಲಿ ಆಪ್ 62 ಸ್ಥಾನ ಗೆದ್ದು ಜಯಭೇರಿ ಬಾರಿಸಿದ್ದರೆ ಬಿಜೆಪಿ 8 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲು ಸಫಲವಾಗಿರಲಿಲ್ಲ

 

Related Articles

error: Content is protected !!