78
ಹನೋಯ್: ವಿಯೆಟ್ನಾಂನ ಹ ಲೊಂಗ್ ಬೇ ಸಮುದ್ರದಲ್ಲಿ ಸುರಿದ ಗುಡುಗು ಮಿಂಚಿನ ಮಳೆಗೆ 48 ಪ್ರಯಾಣಿಕರಿದ್ದ ಪ್ರವಾಸಿ ದೋಣಿ ಮಗುಚಿದ್ದು, 37 ಪ್ರಯಾಣಿಕರು ಸಾವಿಗೀಡಾಗಿದ್ದು ಐವರು ನಾಪತ್ತೆಯಾಗಿದ್ದಾರೆ. ಮಧ್ಯಾಹ್ನದಿಂದ ಏಕಾಏಕಿ ಸುರಿದ ಗುಡುಗು ಮಿಂಚು ಮಳೆಗೆ 20 ಮಕ್ಕಳ ಸಹಿತ 48 ಪ್ರವಾಸಿಗಳಿದ್ದ ದಿ ವಂಡರ್ ಸೀ ಬೋಟ್ ಸಮುದ್ರದಲ್ಲಿ ತಿರುಗಿಬಿದ್ದು ಮುಳುಗಿತ್ತು. ಇದುವರೆಗೆ 37 ಮೃತದೇಹಗಳನ್ನು ಗುರುತಿಸಲಾಗಿದ್ದು, 10 ಮಂದಿಯನ್ನು ರಕ್ಷಿಸಲಾಗಿದೆ. ನಾಲ್ಕು ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

