Home » ಸಮರ ನಿಲ್ಲಿಸಲು ಭಾರತದ ನೆರವಿನ ನಿರೀಕ್ಷೆ : ಜೆಲೆನ್‌ಸ್ಕಿ
 

ಸಮರ ನಿಲ್ಲಿಸಲು ಭಾರತದ ನೆರವಿನ ನಿರೀಕ್ಷೆ : ಜೆಲೆನ್‌ಸ್ಕಿ

by Kundapur Xpress
Spread the love

ಕೀವ್ : ‘ಇದು ಯುದ್ಧದ ಯುಗವಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಪಾದನೆಯನ್ನು ಮತ್ತೊಮ್ಮೆ ಸ್ಮರಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ಜೆಲೆನ್ಸ್‌ಕಿ, ‘ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ಭಾರತದ ಕೊಡುಗೆಯನ್ನು ಉಕ್ರೇನ್ ನಿರೀಕ್ಷಿಸುತ್ತಿದೆ’ ಎಂದು ಹೇಳಿದ್ದಾರೆ.

ಉಕ್ರೇನ್ ಸ್ವಾತಂತ್ರೋತ್ಸವಕ್ಕೆ ಶುಭ ಕೋರಿದ ಪ್ರಧಾನಿ ಮೋದಿಯವರಿಗೆ ಪ್ರತಿಕ್ರಿಯಿಸಿದ ಜೆಲೆನ್ಸ್‌ಕಿ, ‘ಈ ಯುದ್ಧವನ್ನು ಘನತೆಯಿಂದ ಕೊನೆಗಾಣಿಸಿ ಶಾಂತಿ ಸ್ಥಾಪಿಸಲು ವಿಶ್ವವೇ ಬಯಸುತ್ತಿದೆ. ಈ ನಿಟ್ಟಿನಲ್ಲಿ ನಾವು ಭಾರತದ ಕೊಡುಗೆಯನ್ನು ಅಪೇಕ್ಷಿಸುತ್ತಿದ್ದೇವೆ. ರಾಜತಾಂತ್ರಿಕತೆಯನ್ನು ಬಲಪಡಿಸುವ ಪ್ರತಿಯೊಂದು ನಿರ್ಧಾರವೂ ಯುರೋಪ್‌ನಲ್ಲಿ ಮಾತ್ರವಲ್ಲ, ಇಂಡೋ-ಪೆಸಿಫಿಕ್ ಮತ್ತು ಅದರಾಚೆಗೂ ಉತ್ತಮ ಭದ್ರತೆಯನ್ನು ಖಚಿತಪಡಿಸುತ್ತದೆ’ ಎಂದರು.

ಈ ಮೂಲಕ ಜೆಲೆನ್ಸ್‌ಕಿ, ಸಮರವನ್ನು ನಿಲ್ಲಿಸುವಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಬಹುದು ಎಂದಿದ್ದಾರೆ.

 

Related Articles

error: Content is protected !!