203
ಬಹುನಾತ್ರ ಕಿಮುಕ್ತೇನ
* ಅಕ್ಷಯ ತೃತೀಯ ಕೃತಯುಗ ಶುರುವಾದ ದಿನ.
ಒಮ್ಮೆ ದುರ್ವಾಸ ಮಹರ್ಷಿಗಳು ಹಸ್ತಿನಾಪುರಕ್ಕೆ ಆಗಮಿಸಿದರು. ಅವರನ್ನು ಸುಯೋಧನ ಯಥೋಚಿತವಾಗಿ ಸತ್ಕಾರ ಮಾಡಿದ್ದರಿಂದ ಸುಪ್ರೀತರಾದ ದುರ್ವಾಸರು ಇಷ್ಟವಾದುದನ್ನು ತನ್ನಲ್ಲಿ ಕೇಳಲು, ದ್ರೌಪದಿಯ ಊಟದ ನಂತರ ಅಲ್ಲಿ ಊಟ ಮಾಡಿ ಬರುವಂತೆ ಸುಯೋಧನ ದುರ್ವಾಸರಲ್ಲಿ ಕೇಳಿಕೊಂಡ. ಮರುದಿನ ಮಹರ್ಷಿಗಳು ಪಾಂಡವರಿದ್ದ ವನಕ್ಕೆ ತೆರಳಿದರು. ಅವರ ಆದರಾತಿಥ್ಯ ವಿಚಾರದಲ್ಲಿ ದ್ರೌಪದಿ ಕಕ್ಕಾಬಿಕ್ಕಿಯಾದಳು. ಹೀಗಾಗಿ ಕೃಷ್ಣನಿಗೆ ಮೊರೆಯಿಟ್ಟ ದ್ರೌಪದಿ ಕೃಷ್ಣನ ಅನುಗ್ರಹ ಪಡೆದಳು. ಅಕ್ಷಯ ಪಾತ್ರೆ ಅಥವಾ ಸ್ಥಾಲ ಎಲ್ಲಿ ? ಎಂದು ಕೃಷ್ಣ ದ್ರೌಪದಿಯನ್ನು ಕೇಳಿದ. ಬಳಿಕ ಸ್ಥಾಲದಲ್ಲಿದ್ದ ಕಿಂಚಿತ್ ಪಾಕಶೇಷವನ್ನು ತಿಂದು ತೇಗಿದ. ನದಿಸ್ನಾನಕ್ಕೆ ತೆರಳಿದ ದುರ್ವಾಸರು ಹಾಗೂ ಅವರ ಬಳಗಕ್ಕೆ ಹೊಟ್ಟೆ ಬಿರಿದು ಸಿಕ್ಕಾಪಟ್ಟೆ ತೇಗುಬಂತು. ಇದು ಕೃಷ್ಣನ ಮಹಿಮೆ ಎಂದು ಅರಿತ ದುರ್ವಾಸರು ಪಾಂಡವರಿಗೆ ಯಶಸ್ಸು ಕೋರಿ ಅಲ್ಲಿಂದ ಹೊರಟರು. ದುರ್ಯೋಧನ ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆ ಸೆಳೆಯಲು ಮುಂದಾದ. ದ್ರೌಪದಿ ಕೃಷ್ಣನನ್ನು ಸ್ಮರಿಸಿದಳು. ಅವಳ ಸೀರೆ ಅಕ್ಷಯವಾಯಿತು.
ಅಕ್ಷಯ ತೃತೀಯದಂದು ಮಣ್ಣಿನ ಮಡಿಕೆಯಲ್ಲಿ ನೀರು ದಾನ ಮಾಡಿದರೆ ಮೃತ್ಯು ಭಯ ದೂರ. ಬಡವರಿಗೆ ಅಂದು ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರ. ಹಣ್ಣು ಹಂಪಲುಗಳ ವಿತರಣೆಯಿಂದ ಕಾರ್ಯಕ್ಷೇತ್ರದಲ್ಲಿ ಉನ್ನತಿ ಸಾಧ್ಯ. ಅಕ್ಕಿ, ಬೇಳೆ, ಗೋಧಿ, ಬೆಲ್ಲ ಹಂಚುವುದರಿಂದ ಅಕಾಲ ಮೃತ್ಯು ಭಯ ನಿವಾರಣೆ. ಮಜ್ಜಿಗೆ, ಮೊಸರು ದಾನ ಮಾಡಿದರೆ ಪಾಪಕೃತ್ಯಗಳಿಂದ ಮುಕ್ತಿ. ಬೆಳಗ್ಗೆ ಗೋಮಾತೆಯ ಪೂಜೆ ಮಾಡಿ, ಗೋಧಿ, ಬೆಲ್ಲ, ಬಾಳೆಹಣ್ಣು ತಿನ್ನಿಸಿದರೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ದೊರಕೀತು. ಅಂದು ಪಂಚಾಂಗ, ಧಾರ್ಮಿಕ ಗ್ರಂಥಗಳು, ಫಲ ತಾಂಬೂಲ ದಾನದಿಂದ ಅಧಿಕ ಪುಣ್ಯ ಸಂಚಯನವಾದೀತು. ಹೀಗೆ ದಿನದ ಮಹತ್ತ್ವ ಅರಿತು, ತಕ್ಕಂತೆ ನಡೆದಾಗ “ಅಕ್ಷಯ ತೃತೀಯ” ನಿಜಾರ್ಥದ ಅಕ್ಷಯ ಆದೀತು. ಹಾಗೆ ಆಗಲಿ ಎಂದು ಆಶಿಸೋಣವೇ…?!
ಸ್ವರ್ಣ ಕುಂದಾಪುರ
ಬಹುನಾತ್ರ ಕಿಮುಕ್ತೇನ
ಕಿಂ ಬಹ್ವಕ್ಷರ ಮಾಲಯಾ |
ವೈಶಾಖಸ್ಯ ಸಿತಾಮೇಕಂ
ತೃತೀಯಾಮ ಕ್ಷಯಾಂ ಶೃಣು ||
ಎಂದು ಭವಿಷ್ಯತ್ ಪುರಾಣದಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ.
ಅಕ್ಷಯ ತೃತೀಯವನ್ನು ಅಕ್ತಿ ಅಥವಾ ಅಖಾ ತೀಜ್ ಎಂದೂ ಕರೆಯುತ್ತಾರೆ, ಅಕ್ಷಯ ತೃತೀಯ ಭಾರತದಲ್ಲಿ ಮಹತ್ವದ ಹಬ್ಬವೆಂದು ಹೇಳುತ್ತಾರೆ. ಹಿಂದೂ ಪಂಚಾಂಗದಲ್ಲಿ ವೈಶಾಖ ತಿಂಗಳ ಮೂರನೇಯ ದಿನದಂದು ಆಚರಿಸಲಾಗುತ್ತದೆ. ಭಾರತದಾದ್ಯಂತ ಅಕ್ಷಯ ತೃತೀಯವನ್ನು ಹಿಂದೂಗಳು ಆಚರಿಸುವ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದು. ಇದು ಅದೃಷ್ಟ ಮತ್ತು ಸಮೃದ್ಧಿಯ ಹಬ್ಬ ಎಂದು ನಂಬಲಾಗುತ್ತದೆ. ಇದು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ಅಂದರೆ ಭಾರತೀಯ ತಿಂಗಳ ವೈಶಾಖದಲ್ಲಿ ಶುಕ್ಲ ಪಕ್ಷದ ಮೂರನೇ ದಿನದಂದು ಬರುತ್ತದೆ.
“ಅಕ್ಷಯ” ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ ಎಂದಿಗೂ ಕಡಿಮೆಯಾಗದ, ಅಭ್ಯುದಯ, ಯಶಸ್ಸು, ಅನಂತ, ಸಮೃದ್ಧಿ, ಪುಷ್ಕಳತೆ, ಪರಮಾತ್ಮ, ಮೋಕ್ಷ, ಪುನರುತ್ಪತ್ತಿ ಮೊದಲಾದ ಅರ್ಥಗಳಿವೆ. ಅಕ್ಷಯ ಎನ್ನುವುದು ಒಂದು ಬಗೆಯ ಧಾನ್ಯದ ಹೆಸರು. ಅರುವತ್ತು ಸಂವತ್ಸರಗಳಲ್ಲಿ ‘ಅಕ್ಷಯ’ ಕೂಡ ಒಂದು. ಕ್ಷಯ ಎಂದರೆ ಸವೆತ, ಬರಿದು ಎಂದು ಮುಂತಾದ ಅರ್ಥಗಳಿವೆ.
ಚಾಂದ್ರಮಾನ ಪಂಚಾಂಗದಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನವೇ ‘ಅಕ್ಷಯ ತೃತೀಯಾ’. ಅಕ್ಷಯ ತೃತೀಯದಂದು ಧೂಪ, ದೀಪ, ಪುಷ್ಪ, ಚಂದನ ಲೇಪಗಳ ಮೂಲಕ ಅರ್ಚನೆ ಮಾಡಲು ಪ್ರಶಸ್ತ ದಿನ ಎಂದು ಹೇಳಲಾಗಿದೆ. ಈ ದಿನ ಸ್ನಾನ, ಜಪ, ತಪ, ಅಧ್ಯಯನ, ತರ್ಪಣ, ಧ್ಯಾನ ಗೈದರೆ ಅಕ್ಷಯ ಫಲ ಇದೆ ಎಂದು ‘ವ್ರತರಾಜ’ ಎಂಬ ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖವಿದೆ.
* ಅಕ್ಷಯ ತೃತೀಯ ಕೃತಯುಗ ಶುರುವಾದ ದಿನ.
* ಗಣೇಶ ಮತ್ತು ವೇದವ್ಯಾಸರು ಮಹಾಭಾರತ ಮಹಾಕಾವ್ಯ ಬರೆಯಲು ಪ್ರಾರಂಭಿಸಿದ ದಿನ.
* ಅನ್ನಪೂರ್ಣ ದೇವಿ, ಪರಶುರಾಮ, ಕರ್ಣ, ಬಸವೇಶ್ವರ, ಬಲರಾಮರು
ಜನಿಸಿದ ದಿನ.
* ಶ್ರೀಕೃಷ್ಣ ಪರಮಾತ್ಮ ತನ್ನ ಬಡ ಸ್ನೇಹಿತ ಸುಧಾಮನಿಗೆ ಸಂಪತ್ತು, ಐಶ್ವರ್ಯ ಕರುಣಿಸಿದ ಸುದಿನ.
* ಆದಿ ಶಂಕರಾಚಾರ್ಯರು ಕನಕಧಾರಾ ಸ್ತೋತ್ರ ಸಂಯೋಜನೆ ಮಾಡಿದ ಮಹಾದಿನ.
* ಭಗೀರಥನು ಶಿವನ ಜಟೆಯಿಂದ ಗಂಗೆಯನ್ನು ಭೂಮಿಗೆ ತಂದ ವಿಶೇಷ ದಿನ.
* ಕುಬೇರನು ಲಕ್ಷ್ಮಿಯನ್ನು ಪೂಜಿಸಿದ ದಿನವಿದು.
* ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು ಇದುವೇ ದಿನದಂದು.
* ಅಹಲ್ಯೆಗೆ, ಶಬರಿಗೆ, ಹನುಮನಿಗೆ, ಜಯ-ವಿಜಯರಿಗೆ ಸದ್ಗತಿ ದೊರೆತದ್ದು ಇದುವೇ ದಿನದಂದು.
* ಮಹಾವಿಷ್ಣು ಮತ್ತು ಮಹಾಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪೂಜಿಸಿದ ದಿನದಿಂದ ಗಂಗಾಸ್ನಾನ ಸಕಲ ದೋಷ ಪರಿಹಾರಕ ಎಂಬ ರೂಢಿ ಬಂದುದು ಈ ಅಕ್ಷಯ ತೃತೀಯದಂದೇ.
ಚಂದ್ರನಿಗೆ ಇಪ್ಪತ್ತೇಳು ಮಂದಿ ಪತ್ನಿಯರಲ್ಲಿ ರೋಹಿಣಿ ಅವನಿಗೆ ಅತ್ಯಂತ ಹೆಚ್ಚು ಪ್ರೀತಿಯ ಮಡದಿ. ಅಕ್ಷಯ ತೃತೀಯದಂದು ಆಗಸದಲ್ಲಿ ಗೋಚರಿಸುವ ನಕ್ಷತ್ರ ರೋಹಿಣಿ. ಅಕ್ಷಯ ತೃತೀಯದಂದು ಇಷ್ಟದೇವರ ಪೂಜೆ ಮಾಡುವುದು, ಪೂರ್ವಜರಿಗೆ ಗೌರವ ಸಲ್ಲಿಸುವುದು, ಸಜ್ಜನರಿಗೆ ದಾನ ಮಾಡುವುದು, ಗಿಡಮರಗಳಿಗೆ ನೀರು ಉಣಿಸುವುದು, ವಿದ್ಯಾದಾನ ಗೈಯ್ಯುವುದು ಅತಿ ಅಗತ್ಯ. ಅಕ್ಷಯ ಪಾತ್ರೆ ತಾಮ್ರದ್ದು. ಸೂರ್ಯದೇವ ಯುಧಿಷ್ಟಿರನಿಗೆ ಈ ಪಾತ್ರೆಯನ್ನು ಅನುಗ್ರಹಿಸಿದ್ದ.
ಒಮ್ಮೆ ದುರ್ವಾಸ ಮಹರ್ಷಿಗಳು ಹಸ್ತಿನಾಪುರಕ್ಕೆ ಆಗಮಿಸಿದರು. ಅವರನ್ನು ಸುಯೋಧನ ಯಥೋಚಿತವಾಗಿ ಸತ್ಕಾರ ಮಾಡಿದ್ದರಿಂದ ಸುಪ್ರೀತರಾದ ದುರ್ವಾಸರು ಇಷ್ಟವಾದುದನ್ನು ತನ್ನಲ್ಲಿ ಕೇಳಲು, ದ್ರೌಪದಿಯ ಊಟದ ನಂತರ ಅಲ್ಲಿ ಊಟ ಮಾಡಿ ಬರುವಂತೆ ಸುಯೋಧನ ದುರ್ವಾಸರಲ್ಲಿ ಕೇಳಿಕೊಂಡ. ಮರುದಿನ ಮಹರ್ಷಿಗಳು ಪಾಂಡವರಿದ್ದ ವನಕ್ಕೆ ತೆರಳಿದರು. ಅವರ ಆದರಾತಿಥ್ಯ ವಿಚಾರದಲ್ಲಿ ದ್ರೌಪದಿ ಕಕ್ಕಾಬಿಕ್ಕಿಯಾದಳು. ಹೀಗಾಗಿ ಕೃಷ್ಣನಿಗೆ ಮೊರೆಯಿಟ್ಟ ದ್ರೌಪದಿ ಕೃಷ್ಣನ ಅನುಗ್ರಹ ಪಡೆದಳು. ಅಕ್ಷಯ ಪಾತ್ರೆ ಅಥವಾ ಸ್ಥಾಲ ಎಲ್ಲಿ ? ಎಂದು ಕೃಷ್ಣ ದ್ರೌಪದಿಯನ್ನು ಕೇಳಿದ. ಬಳಿಕ ಸ್ಥಾಲದಲ್ಲಿದ್ದ ಕಿಂಚಿತ್ ಪಾಕಶೇಷವನ್ನು ತಿಂದು ತೇಗಿದ. ನದಿಸ್ನಾನಕ್ಕೆ ತೆರಳಿದ ದುರ್ವಾಸರು ಹಾಗೂ ಅವರ ಬಳಗಕ್ಕೆ ಹೊಟ್ಟೆ ಬಿರಿದು ಸಿಕ್ಕಾಪಟ್ಟೆ ತೇಗುಬಂತು. ಇದು ಕೃಷ್ಣನ ಮಹಿಮೆ ಎಂದು ಅರಿತ ದುರ್ವಾಸರು ಪಾಂಡವರಿಗೆ ಯಶಸ್ಸು ಕೋರಿ ಅಲ್ಲಿಂದ ಹೊರಟರು. ದುರ್ಯೋಧನ ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆ ಸೆಳೆಯಲು ಮುಂದಾದ. ದ್ರೌಪದಿ ಕೃಷ್ಣನನ್ನು ಸ್ಮರಿಸಿದಳು. ಅವಳ ಸೀರೆ ಅಕ್ಷಯವಾಯಿತು.
ಭಾರತದ ವಿವಿಧ ಭಾಗಗಳಲ್ಲಿ ಅಕ್ಷಯ ತೃತೀಯವನ್ನು ವಿಭಿನ್ನವಾಗಿ ಆಚರಿಸಲಾಗುತ್ತಾರೆ ಅಕ್ಷಯ ತೃತೀಯಕ್ಕೆ ಸಂಬಂಧಿಸಿದ ಸಂಪ್ರದಾಯ ಮತ್ತು ಪದ್ಧತಿಗಳು ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿ ಕಾಣಬಹುದು. ಅದರೆ ಹಬ್ಬದ ಸಾರವು ಒಂದೇ ಆಗಿದೆ.
ಈ ದಿನದಂದು ಪ್ರಾರಂಭಿಸಿದ ಯಾವುದೇ ಹೊಸ ಯೋಜನೆ ಅಥವಾ ಉದ್ಯಮವು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂಬ ನಂಬಕೆ ನಮ್ಮವರಲ್ಲಿದೆ.
ಅಕ್ಷಯ ತೃತೀಯದಂದು ಚಿನ್ನದ ಆಭರಣ ಕೊಂಡುಕೊಳ್ಳಲೇಬೇಕು ಎಂಬುದು ಜನರ ತಪ್ಪು ತಿಳಿವಳಿಕೆ. ಚಿಂತಿಸದೆ ಚಿನ್ನದ ಮಳಿಗೆಗಳಿಗೆ ಮುಗಿಬಿದ್ದು ಬಂಗಾರ ಕೊಂಡುಕೊಳ್ಳುತ್ತಾರೆ. ಇದು ಆಧುನಿಕ ಕಾಲದ ಮಾರ್ಕೆಟಿಂಗ್ ಟ್ರೆಂಡ್. ಇದು ಸರಿಯಲ್ಲ. ಅಂದು ದೇವಸ್ಥಾನಗಳಲ್ಲಿ ದೇವರ ದರ್ಶನ ಮಾಡುವುದು ಸೂಕ್ತ. ದೇವರ ದರ್ಶನದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಬಾಂಧವ್ಯ ವೃದ್ಧಿ, ಪ್ರೀತಿ, ವಿಶ್ವಾಸ ಅಭಿವೃದ್ಧಿ, ಸ್ನೇಹ, ಗೆಳೆತನ ಸಮೃದ್ಧಿ, ಮಮತೆ, ಒಲವು, ಗೆಲುವು ಪ್ರಾಪ್ತಿ, ಆಯುಷ್ಯ, ಆರೋಗ್ಯ ಹೆಚ್ಚಳ, ಕಾರ್ಯಸಿದ್ಧಿ ನಿಶ್ಚಿತ.
ಅಕ್ಷಯ ತೃತೀಯದಂದು ಮಣ್ಣಿನ ಮಡಿಕೆಯಲ್ಲಿ ನೀರು ದಾನ ಮಾಡಿದರೆ ಮೃತ್ಯು ಭಯ ದೂರ. ಬಡವರಿಗೆ ಅಂದು ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರ. ಹಣ್ಣು ಹಂಪಲುಗಳ ವಿತರಣೆಯಿಂದ ಕಾರ್ಯಕ್ಷೇತ್ರದಲ್ಲಿ ಉನ್ನತಿ ಸಾಧ್ಯ. ಅಕ್ಕಿ, ಬೇಳೆ, ಗೋಧಿ, ಬೆಲ್ಲ ಹಂಚುವುದರಿಂದ ಅಕಾಲ ಮೃತ್ಯು ಭಯ ನಿವಾರಣೆ. ಮಜ್ಜಿಗೆ, ಮೊಸರು ದಾನ ಮಾಡಿದರೆ ಪಾಪಕೃತ್ಯಗಳಿಂದ ಮುಕ್ತಿ. ಬೆಳಗ್ಗೆ ಗೋಮಾತೆಯ ಪೂಜೆ ಮಾಡಿ, ಗೋಧಿ, ಬೆಲ್ಲ, ಬಾಳೆಹಣ್ಣು ತಿನ್ನಿಸಿದರೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ದೊರಕೀತು. ಅಂದು ಪಂಚಾಂಗ, ಧಾರ್ಮಿಕ ಗ್ರಂಥಗಳು, ಫಲ ತಾಂಬೂಲ ದಾನದಿಂದ ಅಧಿಕ ಪುಣ್ಯ ಸಂಚಯನವಾದೀತು. ಹೀಗೆ ದಿನದ ಮಹತ್ತ್ವ ಅರಿತು, ತಕ್ಕಂತೆ ನಡೆದಾಗ “ಅಕ್ಷಯ ತೃತೀಯ” ನಿಜಾರ್ಥದ ಅಕ್ಷಯ ಆದೀತು. ಹಾಗೆ ಆಗಲಿ ಎಂದು ಆಶಿಸೋಣವೇ…?!
ಅಕ್ಷಯವಾಗಲಿ ಭಗವಂತನಲ್ಲಿ ಭಕ್ತಿ
ಅಕ್ಷಯವಾಗಲಿ ನಮ್ಮೆಲ್ಲರ ಬಾಂಧವ್ಯ
ಅಕ್ಷಯವಾಗಲಿ ಪ್ರೀತಿ ವಿಶ್ವಾಸ
ಅಕ್ಷಯವಾಗಲಿ ಸ್ನೇಹ ಗೆಳೆತನ
ಅಕ್ಷಯವಾಗಲಿ ಮಮತೆ
ಅಕ್ಷಯವಾಗಲಿ ಒಲವು
ಅಕ್ಷಯವಾಗಲಿ ಗೆಲುವು
ಅಕ್ಷಯವಾಗಲಿ ಉತ್ತಮ ಆರೋಗ್ಯ
ಅಕ್ಷಯವಾಗಲಿ ನಂಬಿಕೆ ವಿಶ್ವಾಸ
ಅಕ್ಷಯವಾಗಲಿ ಅಭಿವೃದ್ಧಿ
ಅಕ್ಷಯವಾಗಲಿ ಕಾರ್ಯಸಿದ್ಧಿ
ಅಕ್ಷಯ ತೃತೀಯದ ಈ ಶುಭದಿನದಂದು ಕಷ್ಟ, ಚಿಂತೆ ನೋವು ಕ್ಷಯವಾಗಲಿ,
ಸದಾ ಆನಂದ ನಿಮ್ಮದಾಗಲಿ.
ಅಕ್ಷಯ ತೃತೀಯದ ನಲ್ಮೆಯ ಶುಭಾಶಯಗಳು
ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕಿ