Home » ಪುಲ್ವಾಮಾ ದಾಳಿಗೆ ಇಂದಿಗೆ ಸಂದಿತು 7 ವರ್ಷ
 

ಪುಲ್ವಾಮಾ ದಾಳಿಗೆ ಇಂದಿಗೆ ಸಂದಿತು 7 ವರ್ಷ

by Kundapur Xpress
Spread the love

ಭಾರತದ ಇತಿಹಾಸದಲ್ಲಿ ನಡೆದ ಕರಾಳ ಘಟನೆಗಳಲ್ಲಿ ಈ ಘಟನೆಯೂ ಒಂದು .ಫೆಬ್ರವರಿ 14 ಎಂದರೆ ನೆನಪಿಗೆ ಬರುವುದು ಪುಲ್ವಾಮದ ದಾಳಿಯ ಕರಾಳ ಘಟನೆ .ಭಾರತಮಾತೆಯ 40 ಮಂದಿ ಸೇನೆಯ ಜವಾನರು ಹುತಾತ್ಮರಾದ ದಿನ .ದೇಶದ ಪ್ರತಿಯೊಂದು ಹೃದಯವೂ ಸೈನಿಕರಿಗಾಗಿ ಮಿಡಿದ ದಿನ .ಆ ದಿನ ನಡೆದ ಘಟನೆಯನ್ನು ಕೇಳಿ ಇಡೀ ದೇಶವೇ ಆಘಾತಕ್ಕೆ ಒಳಗಾಗಿತ್ತು. ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧರು ಸೇರಿದಂತೆ ಒಟ್ಟು 2547 ಸಿಆರ್ಪಿಎಫ್ ಯೋಧರು 78 ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು. ಆಗಲೇ ಪುಲ್ವಾಮಾ ಜಿಲ್ಲೆಯ ಅವಂತಿಪುರ ಬಳಿ ಈ ಭೀಕರ ದಾಳಿ ನಡೆಯಿತು. ಆತ್ಮಾಹುತಿ ದಾಳಿಕೋರನೊಬ್ಬ 100 ಕೆ.ಜಿ. ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಯೋಧರ ಬಸ್ಗೆ ಬಂದು ಡಿಕ್ಕಿ ಹೊಡೆಸಿದ್ದ. ಈ ಸ್ಫೋಟದ ತೀವ್ರತೆಗೆ ಕಾರು ಮತ್ತು ಬಸ್ ಗುರುತು ಸಿಗದಂತೆ ನಜ್ಜುಗುಜ್ಜಾಗಿದ್ದವು. ಯೋಧರ ಮೃತದೇಹಗಳು 100 ಮೀಟರ್ ವ್ಯಾಪ್ತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.ಭಾರತದ ಪ್ರತಿಯೊಂದು ಗಡಿಯನ್ನು ಕಾಯುವ ಸೈನಿಕರಿಗೆ ಎಷ್ಟು ಸಲ ನಮನ ಸಲ್ಲಿಸಿದರು ಸಾಲದು ಅಷ್ಟೇ ಭಕ್ತಿ ಭಾವ ಮೂಡುತ್ತದೆ ಭಾರತೀಯ ಸೈನಿಕರ ಮೇಲೆ .ಫೆ. 26ರಂದು, ಭಾರತೀಯ ವಾಯುಪಡೆಗೆ ಸೇರಿದ 12 ಮಿರಾಜ್ 2000 ಮಾದರಿಯ ಯುದ್ಧ ವಿಮಾನಗಳು, ಭಾರತ – ಪಾಕಿಸ್ತಾನ ನಡುವಿನ ಗಡಿ ರೇಖೆಯನ್ನು ದಾಟಿ (ಎಲ್ಒಸಿ), ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ನಲ್ಲಿದ್ದ ಜೈಶ್-ಎ- ಮೊಹಮ್ಮದ್ ಸಂಘಟನೆಯ ಉಗ್ರ ತರಬೇತಿ ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆಸಿತು. ಇದರಲ್ಲಿ 300ರಿಂದ 350 ಉಗ್ರರು ಹತರಾದರು.ಇದಕ್ಕೆ ಪ್ರತೀಕಾರ ಎಂಬಂತೆ, ಫೆ. 27ರಂದು ಪಾಕಿಸ್ತಾನದ ವಾಯುಪಡೆಯ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಲು ಎಲ್ಒಸಿ ದಾಟಿ ಬಂದವು. ಅವುಗಳನ್ನು ಹಿಮ್ಮೆಟ್ಟಿಸಲು ಭಾರತದ ಮಿಗ್ – 21 ವಿಮಾನಗಳಲ್ಲಿ ಭಾರತೀಯ ಯೋಧರು ಆಗಸಕ್ಕೆ ನೆಗೆದಿದ್ದರು. ಅವುಗಳಲ್ಲೊಂದನ್ನು ಪಾಕಿಸ್ತಾನ ಸೇನೆಯು ಹೊಡೆದುರುಳಿಸಿತು. ಅದರಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಸೆರೆ ಹಿಡಿಯಿತು .ಭಾರತ ಸರ್ಕಾರದ ಒತ್ತಡದಿಂದಾಗಿ ಅಭಿನಂದನ್ ರನ್ನು ಮತ್ತೆ ಬಿಡುಗಡೆ ಮಾಡಿತು .ಫುಲ್ವಾಮಾ ದಾಳಿಯ ಷಡ್ಯಂತ್ರ ರೂಪಿಸಿದವರನ್ನು ಹಾಗೂ ಅದಕ್ಕೆ ಸಹಕಾರ ನೀಡಿದವರನ್ನು ಭಾರತ ಹೆಡೆಮುರಿ ಕಟ್ಟುವಲ್ಲಿ ಸಫಲವಾಯಿತು. ಕರಾಳ ದಾಳಿಯ ನೆನೆಪು ಯಾವತ್ತೂ ಮರೆಯಲಾಗದು . 40 ಕುಟುಂಬಗಳ ಮಕ್ಕಳ ಬಲಿದಾನ ದೇಶ ಯಾವತ್ತೂ ಮರೆಯಲಾಗದು .

ಪ್ರದೀಪ್‌ ಕುಮಾರ್‌ ಕೋಮುಂಜೆ

 

Related Articles

error: Content is protected !!