Home » ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ
 

ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ

ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆ

by Kundapur Xpress
Spread the love

ಜೂನ್ 21ರಂದು ಆಚರಿಸುವ ಅಂತರಾಷ್ಟ್ರೀಯ ಯೋಗ ದಿನವು ಭಾರತದ ಪ್ರಾಚೀನ ಜ್ಞಾನ, ಸಂಸ್ಕೃತಿ ಮತ್ತು ಆರೋಗ್ಯಪೂರ್ಣ ಜೀವನಶೈಲಿಯ, ಜಗತ್ತಿಗೆ ನೀಡಿದ ಅಮೂಲ್ಯ ಕಾಣಿಕೆಯಾದ ಯೋಗವನ್ನು ಸ್ಮರಿಸುವ ದಿನವಾಗಿದೆ.

ಯೋಗ ಎಂದರೆ ಶರೀರ, ಮನಸ್ಸು ಮತ್ತು ಆತ್ಮದ ಏಕತೆ. ಇದು ಕೇವಲ ವ್ಯಾಯಾಮವಲ್ಲ, ಇದು ಆಂತರಿಕ ಶಾಂತಿ, ಆತ್ಮಸಾಕ್ಷಾತ್ಕಾರ ಮತ್ತು ವಿಶ್ವ ಶಾಂತಿಗೆ ದಾರಿ ಒದಗಿಸುವ ಒಂದು ಪರಿಪೂರ್ಣ ವಿಧಾನ.

*ಯೋಗದ ಇತಿಹಾಸ ಮತ್ತು ಮಹತ್ವ*

ಯೋಗದ ಉಗಮ ಸುಮಾರು 5000 ವರ್ಷಗಳ ಹಿಂದಿನ ಭಾರತದ ಸಂಸ್ಕೃತಿಯಲ್ಲಿ ಉಲ್ಲೇಖವಿದೆ. ಪತಂಜಲಿ ಮಹರ್ಷಿಯು ‘ಯೋಗ ಸೂತ್ರ’ದ ಮೂಲಕ ಯೋಗವನ್ನು ವಿಜ್ಞಾನ ಬದ್ಧವಾಗಿ ಪ್ರಸ್ತುತಪಡಿಸಿದರು. ಇದನ್ನು ಭಾರತೀಯ ಋಷಿಗಳು ತಪಸ್ಸಿನ ಮೂಲಕ ಜೀವನದ ಭಾಗವನ್ನಾಗಿ ಮಾಡಿಕೊಂಡಿದ್ದರು.

ಯೋಗ ಎಂದರೆ ಏನು ?

“ಯುಜ್” ಎಂಬ ಸಂಸ್ಕೃತ ಧಾತುದಿಂದ ಹುಟ್ಟಿದ ಈ ಪದಕ್ಕೆ ಅರ್ಥ – ಏಕತೆ, ಜೋಡಣೆ.

ಅಂದರೆ ಮನಸ್ಸು – ಶರೀರ – ಆತ್ಮ – ಪ್ರಕೃತಿ – ಪರಮಾತ್ಮ, ಇವೆಲ್ಲದರ ಸಂಯೋಜನೆಯ ಹೆಸರೇ ಯೋಗ. ಯೋಗ ಎಂದರೆ ಅದು ಕಣ್ಣು ಮುಚ್ಚಿ ಪ್ರಪಂಚವನ್ನು ಕಾಣುವುದು… ಅದು ಉಸಿರಲ್ಲಿ ಸಲ್ಲಿಸುವ ಪ್ರಾರ್ಥನೆ, ಲಯದ ತಪಸ್ಸು. ಅದು ಶರೀರದ ಭಾಷೆ ಅಲ್ಲ, ಆತ್ಮದ ನುಡಿಗಟ್ಟು! ಯೋಗ ಎಂದರೆ ಬರೀ ನಿಲ್ಲುವುದು,ಕುಳಿತು ಕೊಳ್ಳುವುದಲ್ಲ, ವ್ಯಾಯಾಮವೂ ಅಲ್ಲ…ಅದೊಂದು ಮೌನ.. ಅದರಲ್ಲೇ ಎಲ್ಲವೂ ಆಗುತ್ತಿರುತ್ತದೆ –ಶರೀರ ಶುದ್ಧವಾಗುತ್ತದೆ, ಮನಸ್ಸು ಹಸಿರಾಗುತ್ತದೆ, ಆತ್ಮ ನಗುತ್ತದೆ… ಯೋಗವೊಂದು ಕ್ರಿಯೆಯಲ್ಲ – ಅದು ಕಲೆ. ಯೋಗವೊಂದು ಮಾರ್ಗವಲ್ಲ – ಅದು ದಿಕ್ಕು. ಯೋಗವೊಂದು ಅಭ್ಯಾಸವಲ್ಲ – ಅದು ಜೀವನದ ಧ್ಯೇಯ.

ಯೋಗವು ಹೃದಯಾಘಾತ, ಮಧುಮೇಹ, ರಕ್ತದೊತ್ತಡ, ಆತಂಕ, ಖಿನ್ನತೆ ಇತ್ಯಾದಿ ಕಾಯಿಲೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಇದು ಕೇವಲ ಶರೀರವಲ್ಲ, ಮನಸ್ಸಿನ ಆರೋಗ್ಯವನ್ನೂ ಪ್ರಭಾವಿಸುತ್ತದೆ. ಯೋಗದಿಂದ ಆರೋಗ್ಯ – ಯೋಗದಿಂದ ಶಾಂತಿ – ಯೋಗದಿಂದ ಸಮಾನತೆ – ಯೋಗದಿಂದ ಮುಕ್ತಿಯತ್ತ ಹೆಜ್ಜೆ

*ಅಂತರಾಷ್ಟ್ರೀಯ ಯೋಗ ದಿನದ ಉದ್ದೇಶ*

ವಿಶ್ವದಾದ್ಯಾಂತ ಯೋಗದ ಮಹತ್ವವನ್ನು ಪಸರಿಸಲು ಮತ್ತು ಎಲ್ಲರ ಆರೋಗ್ಯ ಸುಧಾರಣೆಗೆ ಪ್ರೇರಣೆಯಾಗಲು, ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು 2014ರಲ್ಲಿ United Nations ನಲ್ಲಿ ಈ ದಿನವನ್ನು ಪ್ರಸ್ತಾವನೆ ಮಾಡಿದರು. 177 ರಾಷ್ಟ್ರಗಳು ಬೆಂಬಲ ನೀಡಿ, ಜೂನ್ 21ನ್ನು ‘ಅಂತರಾಷ್ಟ್ರೀಯ ಯೋಗ ದಿನ’ವನ್ನಾಗಿ ಘೋಷಿಸಲಾಯಿತು.

*ಈ ವರ್ಷದ ಥೀಮ್ (2025): “Yoga for Self and Society”* ಅಂದರೆ – ನಾನು ಚೆನ್ನಾಗಿದ್ದರೆ, ಸಮಾಜವೂ ಚೆನ್ನಾಗಿರುತ್ತದೆ. ಯೋಗವು ವ್ಯಕ್ತಿಯ ಅಂತರಂಗವನ್ನು ಸುಧಾರಿಸುತ್ತದೆ. ಆ ವ್ಯಕ್ತಿ ಸಮಾಜಕ್ಕೆ ಪ್ರೇರಣೆಯಾಗುತ್ತಾನೆ.

ಯೋಗವು ಭಾರತೀಯ ಪರಂಪರೆಯ ಜ್ಯೋತಿಯಂತೆ ಬೆಳಗುತ್ತಾ ಸಾಗಬೇಕು. ಪ್ರತಿಯೊಬ್ಬರೂ ಶಾರೀರಿಕ, ಮಾನಸಿಕ ಹಾಗೂ ಆತ್ಮಿಕವಾಗಿ ಸಮತೋಲನ ಹೊಂದಿದ ಜೀವನವನ್ನು ನಡೆಸಲು ಯೋಗವನ್ನು ಅಳವಡಿಸಿಕೊಳ್ಳಬೇಕು.

ಯೋಗವು ಕೇವಲ ಶರೀರದ ವ್ಯಾಯಾಮವಲ್ಲ, ಅದು ಜೀವನದ ಪಥವಾಗಿದೆ.” ಯೋಗ ಎಂದರೆ ಬರೀ ನಿಲ್ಲುವುದು,ಕುಳಿತು ಕೊಳ್ಳುವುದಲ್ಲ, ವ್ಯಾಯಾಮವೂ ಅಲ್ಲ…ಅದೊಂದು ಮೌನ.. ಅದರಲ್ಲೇ ಎಲ್ಲವೂ ಆಗುತ್ತಿರುತ್ತದೆ –ಶರೀರ ಶುದ್ಧವಾಗುತ್ತದೆ, ಮನಸ್ಸು ಹಸಿರಾಗುತ್ತದೆ, ಆತ್ಮ ನಗುತ್ತದೆ…

ಯೋಗವೊಂದು ಕ್ರಿಯೆಯಲ್ಲ – ಅದು ಕಲೆ.

ಯೋಗವೊಂದು ಮಾರ್ಗವಲ್ಲ – ಅದು ದಿಕ್ಕು.

ಯೋಗವೊಂದು ಅಭ್ಯಾಸವಲ್ಲ – ಅದು ಜೀವನದ ಧ್ಯೇಯ.

*”ನಾನು”* ಹೋಗಿ *”ನಾವಾಗುವುದೇ”* ಯೋಗದ ಪ್ರಾರಂಭ. ನಿಮ್ಮೆಲ್ಲರ ಹೃದಯದಲ್ಲಿ ಸ್ವಲ್ಪ ಯೋಗ ಬಿತ್ತಿರಿ…

ಅದು ಒಂದಿನ ಶಾಂತಿಯ ಹಣ್ಣುಗಳೊಂದಿಗೆ ಸಂತೋಷ, ಆರೋಗ್ಯದ ಹೂವಿನಂತೆ ಕಂಗೊಳಿಸುವದು.

“ಯೋಗ ಮಾಡುವವನು ಆರೋಗ್ಯ ಪಡೆಯುತ್ತಾನೆ… ಆದರೆ ಯೋಗದ ಸಾರ್ಥಕತೆ – ಇತರರ ಜೀವನವನ್ನೂ ಪ್ರಕಾಶಮಾನಗೊಳಿಸುವಲ್ಲಿ ಇದೆ.” ಬಾಳಿನ ಪ್ರತಿದಿನವೂ ಯೋಗದ ದಿನವಾಗಲಿ. ಬಾಳಿನ ಪ್ರತಿಪಲವೂ ಯೋಗದ ಫಲವಾಗಲಿ.

ಈ ದಿನದ ಮೂಲಕ ನಾವು ಎಲ್ಲರಿಗೂ ಯೋಗದ ಶಕ್ತಿ, ತತ್ವ ಮತ್ತು ಬಳಕೆಯ ಪ್ರಾಮುಖ್ಯತೆಯನ್ನು ತಿಳಿಸಬೇಕು. ಸಮಸ್ತ ಭಾರತೀಯರಿಗೂ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ವಂದನೆಗಳೊಂದಿಗೆ

*ಸ್ವರ್ಣ ಕುಂದಾಪುರ* ಆಪ್ತ ಸಮಾಲೋಚಕಿ

 

Related Articles

error: Content is protected !!