Home » ಆನೆಗುಡ್ಡೆ ಶ್ರೀ ವಿನಾಯಕ ದೇವರ ಪೂಜಾ ಪರ್ಯಾಯ ಹಸ್ತಾಂತರ
 

ಆನೆಗುಡ್ಡೆ ಶ್ರೀ ವಿನಾಯಕ ದೇವರ ಪೂಜಾ ಪರ್ಯಾಯ ಹಸ್ತಾಂತರ

by Kundapur Xpress
Spread the love

ಕುಂಭಾಸಿ :  ಆನೆಗುಡ್ಡೆ ಶ್ರೀ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಮಿಥುನ ಮಾಸದ ಮೊದಲ ದಿನ ಅಂದರೆ ತಾ,16/6/2025 ರಂದು ಪರ್ಯಾಯ ಪೂಜೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಉಪಾಧ್ಯಾಯ ಕುಟುಂಬ ಕುಲಪುರೋಹಿತರಾದ ವೇದಮೂರ್ತಿ ಹೂವಿನಕೆರೆ ಶ್ರೀ ವಾದಿರಾಜ ಭಟ್, ನೇರಂಬಳ್ಳಿ ಶ್ರೀ ಪ್ರಾಣೇಶ ತಂತ್ರಿ, ಶ್ರೀ ವಾದೀಶ ಭಟ್ ಹಾಗೂ ಇತರ ಪುರೋಹಿತರ ಸಮ್ಮುಖದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಹಿಂದಿನ ಪರ್ಯಾಯ ಅರ್ಚಕರಾದ ಶ್ರೀ ಕೆ.ಕೃಷ್ಣಾನಂದ ಉಪಾಧ್ಯಾಯರು ಮುಂದಿನ ಪರ್ಯಾಯ ಅರ್ಚಕರಾದ ಶ್ರೀ ಕೆ.ವ್ಯಾಸ ಉಪಾಧ್ಯಾಯ ಹಾಗೂ ಸಹೋದರರಿಗೆ ಕೀಲಿಕೈ ಹಸ್ತಾಂತರಿಸುವ ಮೂಲಕ ಮುಂದಿನ ಒಂದು ವರ್ಷ ಅವಧಿಯವರೆಗೆ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಾಯ ಕುಟುಂಬದ ಎಲ್ಲಾ ಸದಸ್ಯರು, ಪುರೋಹಿತ ವರ್ಗ ಹಾಗೂ ಆಡಳಿತ ಮಂಡಳಿ ಹಾಗೂ ಅರ್ಚಕ ಸಿಬ್ಬಂದಿ ಉಪಸ್ಥಿತರಿದ್ದರು.

 

Related Articles

error: Content is protected !!