ಕೋಟ : ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ ದೇಗುಲ ಕೋಡಿ ಕನ್ಯಾಣ ಇದರ ವಾರ್ಷಿಕ ಗೆಂಡೋತ್ಸವ ಮತ್ತು ಮಂಡಲಪೂಜೆ ತುಲಾಭಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಶನಿವಾರ ವಾರ್ಷಿಕ ಗೆಂಡೋತ್ಸವದ ಅಂಗವಾಗಿ ಶನಿವಾರ ಗಣಹೋಮ,ರಂಗಪೂಜೆ,ತುಳಸಿ ಪೂಜೆ ,ಗೆಂಡ ಸೇವೆ,ಮಹಾ ಅನ್ನಸಂತರ್ಪಣೆ ಅದೇ ರೀತಿ ಭಾನುವಾರ ಶ್ರೀ ದೇವಿಗೆ ಮಹಾ ಮಂಗಳಾರತಿ ,ಮಂಡಲಪೂಜೆ,ಹಣ್ಣುಕಾಯಿ,ತುಲಾಭಾರಾಧಿ ಹರಕೆ,ಅನ್ನಸಂತರ್ಪಣೆ, ಮಹಾಮಂಗಳಾರತಿ, ಮಹಾಬಲಿ ಪೂಜೆ,ಶೆಡಿ ಪೂಜೆ,ಬೆನಗಲ್ಲು ಪೂಜೆ,ಜೋಗಿ ಪರುಷನ ದರ್ಶನ,ಬಾಗಿಲು ಬೊಬ್ಬರ್ಯನ ದರ್ಶನ,ಅಜ್ಜಮ್ಮ ದೇವರಿಗೆ ಪುಷ್ಭಾರ್ಚನೆ ಕಾರ್ಯಕ್ರಮಗಳು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಸಮೂಹಗಳ ನಡುವೆ ಜರಗಿತು
ಜ.20ಕ್ಕೆ ಶುದ್ಧಪೂಜೆ,ಹಸಲ ದೈವಕ್ಕೆ ಹರಕೆ ಸಲ್ಲಿಕೆ,ಕೋಳೆಯರಮಾವ ಹರಕೆ,ರಾತ್ರಿ 9ಕ್ಕೆ ಮಲಸಾವರಿ ಮತ್ತು ಪರಿವಾರ ದೈವಗಳ ಕೋಲ ,ಜ.21ಕ್ಕೆ ಮಲಸಾವರಿ ದೈವ ದರ್ಶನ, ಹರಕೆ ಸೇವೆ ಕೇಳಿಕೆ,ಸಂಜೆ ಮಹಾ ಪ್ರಸಾದ ವಿತರಣೆ ,ನಿಲಾವರ ಮೇಳದಿಂದ ಕಾಲಮಿತಿಯ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ