Home » ಧರ್ಮಸ್ಥಳ ಗುಂಡಿ ಅಗೆಯುವ ಕೆಲಸ ಶೀಘ್ರವೇ ಅಂತ್ಯ
 

ಧರ್ಮಸ್ಥಳ ಗುಂಡಿ ಅಗೆಯುವ ಕೆಲಸ ಶೀಘ್ರವೇ ಅಂತ್ಯ

ಸಿಎಂ ಸಿದ್ದರಾಮಯ್ಯ

by Kundapur Xpress
Spread the love

ಬೆಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿರುವ ಆರೋಪದ ಹಿನ್ನೆಲೆಯಲ್ಲಿ ರಚಿಸಿದ್ದ ವಿಶೇಷ ಶನಿಖಾ ತಂಡ (ಎಸ್‌ಐಟಿ) ಹನ್ನೆರಡು ಕಡೆ ಶೋಧನೆ ನಡೆಸಿದ್ದು, ಹದಿಮೂರನೇ ಕಡೆಯೂ ಮೃತದೇಹದ ಅವಶೇಷ ಪತ್ತೆಯಾಗದಿದ್ದರೆ ಶೋಧನೆ ನಿಲ್ಲಿಸಬೇಕು  ಎಂದು ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ ಹೂತಿಡಲಾಗಿದೆ ಎಂದು ಹೇಳಲಾಗಿರುವ   ಶವಗಳ ಶೋಧ ಅಥವಾ ಧರ್ಮಸ್ಥಳ ಕ್ಷೇತ್ರದ ಕುರಿತು ಯಾರೊಬ್ಬರೂ ಪ್ರತಿಕ್ರಿಯೆ ನೀಡಬಾರದು. ಈ ವಿಚಾರದಲ್ಲಿ ಪಕ್ಷದ ಶಾಸಕರು, ಪರಿಷತ್’ ಸದಸ್ಯರು ಸೇರಿ ಯಾರೊಬ್ಬರೂ ಭಾವನಾತ್ಮಕವಾಗಿ ಹೇಳಿಕೆ ನೀಡಬಾರದು ಎಂದೂ ಇದೇ ವೇಳೆ ತಾಕೀತು ಮಾಡಿದರು ಎಂದು ಮೂಲಗಳು ಹೇಳಿವೆ.

 

Related Articles

error: Content is protected !!