103
ಮೈಸೂರು : ಬಾನು ಮುಸ್ತಾಕ್ ಅವರು ಕನ್ನಡಾಂಬೆ ಕುರಿತ ಹೇಳಿಕೆಗೆ ಮೊದಲು ಸ್ಪಷ್ಟಿಕರಣ ನೀಡಿ, ನಂತರ ದಸರಾ ಉದ್ಘಾಟಿಸಲಿ ಎಂದು ಸಂಸದ ಯದುವೀರ್‌ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಬಾನು ಮುಸ್ತಾಕ್ ಅವರನ್ನ ಆಯ್ಕೆ ಮಾಡಿದಾಗ ನಾನು ಸ್ವಾಗತಿಸಿದ್ದೆ ನಂತರ ಅವರ ಹಳೇ ಭಾಷಣ ನೋಡಿದ್ದೇನೆ. ಆ ಭಾಷಣಕ್ಕೆ ಅವರು ಸ್ಪಷ್ಟಿಕರಣ ಕೊಡಲಿ ಅಥವಾ ಹೇಳಿಕೆಯನ್ನ ವಾಪಸ್ ಪಡೆಯಲಿ ಎಂದು ಹೇಳಿದರು.
ಅವರ ಧರ್ಮರ ಆಚರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ಧರ್ಮದಲ್ಲಂತೂ ಮೂರ್ತಿ ಪೂಜೆ ಶ್ರೇಷ್ಠ. ಅವರು ಚಾಮುಂಡಿಶ್ವರಿ ದೇವಿಯನ್ನು ಗೌರವಿಸಿ ಬರಬೇಕು. ಭಕ್ತಿಯಿಂದ ದೇವರನ್ನ ಪೂಜಿಸಬೇಕು. ಇದಕ್ಕೂ ಮೊದಲು ತಮ್ಮ ಹಳೆಯ ಹೇಳಿಕೆಗೆ ಸ್ಪಷ್ಟಿಕರಣ ಕೊಡಬೇಕು ಎಂದರು.
ಸದಾ ಹಿಂದೂ ದೇವಸ್ಥಾನ :
ಚಾಮುಂಡಿಬೆಟ್ಟ ಕುರಿತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದ. ಇದು ಸದಾ ಕಾಲದಿಂದಲೂ ಹಿಂದೂ ದೇವಸ್ಥಾನ. ಇದು ಹೇಗೆ ಬೇರೆಯವರ ಶ್ರದ್ದಾ ಕೇಂದ್ರ ಆಗಲು ಸಾಧ್ಯ ಎಂದು ಯದುವೀರ್ ಪ್ರಶ್ನಿಸಿದರು.

