126
ಇಸ್ಲಾಮಾಬಾದ್ : ಭಾರತದೊಂದಿಗಿನ ಸಂಭಂಧ ದಿನೇ ದಿನೇ ಹಳಸುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನ. 120 ಕೀಮೀ ಸಾಗುವ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದೆ. ಎರಡೇ ದಿನದಲ್ಲಿ ನಡೆದ 2ನೇ ಕ್ಷಿಪಣಿಯ ಪರೀಕ್ಷೆ ಇದಾಗಿದೆ. ಶನಿವಾರವಷ್ಟೇ 450 ಕಿ.ಮೀ. ಕ್ರಮಿಸಬಲ್ಲ ಮಿಸೈಲ್ ಪರೀಕ್ಷೆ ನಡೆಸಲಾಗಿತ್ತು.
‘120 ಕಿ.ಮೀ. ಕ್ರಮಿಸಬಲ್ಲ ಫತಾಹ್ ಹೆಸರಿನ ಖಂಡಾಂತರ ಕ್ಷಿಪಣಿಯನ್ನು ಪಡೆಗಳ ಕಾರ್ಯಾಚರಣೆ ಸಿದ್ದತೆ, ಕ್ಷಿಪಣಿಯ ನಿಖರತೆ ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಮೌಲೀಕರಿಸಲು ನಡೆಸಲಾಗಿದೆ’ ಎಂದು ಪಾಕ್ ಸೇನೆ ತಿಳಿಸಿದೆ. ಆದರೆ ಪರೀಕ್ಷೆಯಲ್ಲಿ ಎಲ್ಲಿ ನಡೆಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ

