81
ನವದೆಹಲಿ : ‘ಮತಗಳ್ಳತನ ಆರೋಪಕ್ಕೆ ಸಂಬಂಧಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ 124 ವರ್ಷದ ಮಿಂಟಾ ದೇವಿ ಹೆಸರು ಮೊದಲ ಬಾರಿ ಮತದಾರರ ಪಟ್ಟಿಯಲ್ಲಿರುವುದನ್ನು ಉಲ್ಲೇಖಿಸಿ, ‘ಅಭಿ ಪಿಕ್ಟರ್ ಬಾಕೀ ಹೈ (ಇದು ಇಲ್ಲಿಗೇ ಮುಗಿದಿಲ್ಲ).ಇಂಥ ಅನೇಕ ಪ್ರಕರಣ ಇವೆ ಎಂದು ಹೇಳಿದ್ದಾರೆ.
ಒಂದು ವ್ಯಕ್ತಿಗೆ ಒಂದೇ ಮತ ನಮ್ಮ ಸಂವಿಧಾನದ ಮೂಲ ಆಧಾರ. ಇದನ್ನು ರಕ್ಷಣೆ ಮಾಡುವಲ್ಲಿ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ . ಮಹದೇವಪುರ ರೀತಿಯ ಅಕ್ರಮದ ಕಾರಣ ದೇಶದಲ್ಲಿ 48 ಕ್ಷೇತ್ರ ಸೋತಿದ್ದೇವೆ ಎಂದಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಒಂದು ಕ್ಷೇತ್ರದ ವಿಚಾರ ಅಲ್ಲ, ಬದಲಾಗಿ ಹಲವು ಕ್ಷೇತ್ರಗಳಲ್ಲಿ ಈ ರೀತಿ ಮತಗಳ್ಳತನ ಆಗಿದೆ. ರಾಷ್ಟ್ರೀಯಮಟ್ಟದಲ್ಲಿ ವ್ಯವಸ್ಥಿತವಾಗಿ ಈ ರೀತಿ ಮಾಡಲಾಗಿದೆ. ಚುನಾವಣಾ ಆಯೋಗಕ್ಕೆ ಇದರ ಅರಿವಿದೆ. ಇದೀಗ ನಮಗೂ ಗೊತ್ತಾಗಿದೆ. ಅದಕ್ಕೇ ಬೀದಿಗಿಳಿದಿದ್ದವೆ ಎಂದರು.

