Home » ಶ್ರೀನಾಗಬೊಬ್ಬರ್ಯ, ಹಾಯ್ಗುಳಿ ಹಾಗೂ ಪರಿವಾರ ದೇವಸ್ಥಾನ
 

ಶ್ರೀನಾಗಬೊಬ್ಬರ್ಯ, ಹಾಯ್ಗುಳಿ ಹಾಗೂ ಪರಿವಾರ ದೇವಸ್ಥಾನ

10ನೇ ವರ್ಷದ ವರ್ಧಂತ್ಯೋತ್ಸವ

by Kundapur Xpress
Spread the love

ಕುಂದಾಪುರ: ನಗರದ ಚಿಕ್ಕನ್‌ಸಾಲ್ ರಸ್ತೆಯ ರೋಯಲ್ ಸಭಾಭವನದ ಹತ್ತಿರದ ಶ್ರೀನಾಗಬೊಬ್ಬರ್ಯ, ಹಾಯ್ಗುಳಿ ಹಾಗೂ ಪರಿವಾರ ದೇವಸ್ಥಾನದ 10ನೇ ವರ್ಷದ ವರ್ಧಂತ್ಯೋತ್ಸವವು ಇಂದು ಏಪ್ರಿಲ್‌ 04 ಮತ್ತು 05 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ವರ್ಧಂತ್ಯೋತ್ಸವದ ದಶಮಾನೋತ್ಸವದ ಪ್ರಯುಕ್ತ  ಏಪ್ರಿಲ್‌ 04 ರಂದು ಸಂಜೆ  5.30ಕ್ಕೆ ಶ್ರೀ ದೇವರಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನಪ್ರಧಾನ ಹೋಮ, ಕಲಶ ಸ್ಥಾಪನೆ, ಬೊಬ್ಬರ್ಯ, ಹ್ಯಾಗುಳಿ ಮತ್ತು ಕೀಳು ದೇವರಿಗೆ ಕಲಾಭಿವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ 8.00 ಕ್ಕೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.) ಕೊಂಚಾಡಿ ಇವರಿಂದ ಕುಣಿತ ಭಜನ ನಡೆಯಲಿದೆ.

05 ರಂದು ಶನಿವಾರ ಬೆಳಿಗ್ಗೆ 9ಕ್ಕೆ ಶ್ರೀ ನಾಗದೇವರಿಗೆ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಧಾನ ಹೋಮ, ಮಹಾಪೂಜೆ, ನಾಗದೇವರ ದರ್ಶನ ನಡೆಯಲಿದೆ ಬೆಳಿಗ್ಗೆ 11.30ಕ್ಕೆ ಧರ್ಮಸ್ಥಳದ ಮೇಳದ ಗಣಪತಿ ದೇವರಿಗೆ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ. ಮಧ್ಯಾಹ್ನ ಗಂಟೆ 12.00ಕ್ಕೆ ಪಲ್ಲಪೂಜೆ

12.30ಕ್ಕೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಬಳಿಕ ಸೇವಾಕರ್ತರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 4.30ಕ್ಕೆ ಶ್ರೀ ಮೈಲಾರೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಕುಂದಾಪುರ ಇವರಿಂದ ಭಜನಾ ಕಾರ್ಯಕ್ರಮ. ಸಂಜೆ 6ಕ್ಕೆ ಸೇವಾ ಕರ್ತರಿಂದ ವಿಶೇಷ ರಂಗಪೂಜೆ ಹಾಗೂ ಪ್ರಸಾದ ವಿತರಣೆಯಾಗಲಿದ್ದು ರಾತ್ರಿ ಗಂಟೆ 7.00ರಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಯು.ರಾಧಾಕೃಷ್ಣವರು ತಿಳಿಸಿದ್ದು ಇದೇ ಸಂದರ್ಭದಲ್ಲಿ ದೇಗುಲದ ಅಭಿವೃದ್ದಿಗಾಗಿ 4.0 ಸೇಂಟ್ಸ್‌ ಜಾಗವನ್ನು ಖರೀದಿಸಲಾಗುವುದು ಎಂದರು

 

Related Articles

error: Content is protected !!