2.8K
ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯ ನಿವಾಸಿಯಾದ ಡಾ. ಬಿ ಸತೀಶ್ ನಾಯ್ಕ್ ಹಾಗೂ ಶ್ರೀಮತಿ ಅನಿತಾ ಸತೀಶ್ ನಾಯ್ಕ್ ಇವರ ಪುತ್ರಿಯಾದ ಅನ್ಶಿತಾ ಸತೀಶ್ ನಾಯ್ಕ್ ಇವಳು ಕತಾರ್ ಇಲ್ಲಿನ ದೋಹದಲ್ಲಿರುವ ದೆಹಲಿಯ ಸಿ ಬಿ ಎಸ್ ಸಿ ಬೋರ್ಡ್‌ನಿಂದ ಮಾನ್ಯತೆ ಪಡೆದ ಆಲೀವ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದ್ದಾಳೆ
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ಕಾಮರ್ಸ್ ವಿಭಾಗದಲ್ಲಿ ಈಕೆ ಶೇಕಡಾ 95.80 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದು ಇವಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ
ಕಳೆದ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನ್ಶಿತಾ ಸತೀಶ್ ನಾಯ್ಕ್ ಶೇಕಡ 96.40 ಅಂಕ ಪಡೆದು ಸಾಧನೆ ಮಾಡಿದ್ದು ಕತಾರಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಈಕೆಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗಿತ್ತು
ಕುಂದಾಪುರ ನಗರದ ಚಿಕ್ಕನಸಾಲು ರಸ್ತೆಯ ನಿವಾಸಿಯಾದ ಬಿ ಸತೀಶ್ ನಾಯ್ಕ್ ಅವರು ಕತಾರಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ
ಡಾ. ಬಿ ಸತೀಶ್ ನಾಯ್ಕ್ ಹಾಗೂ ಶ್ರೀಮತಿ ಅನಿತಾ ಸತೀಶ್ ನಾಯ್ಕ್ ಇವರ ಪುತ್ರಿಯಾದ ಅನ್ಶಿತಾ ಸತೀಶ್ ನಾಯ್ಕ್ ಇವಳು ಕುಂದಾಪುರದ ಶ್ರೀ ಕೃಷ್ಣ ಫ್ರೇಮ್ ವರ್ಕ್ಸ್ ಇದರ ಮಾಲಕರು ಹಾಗೂ ಪಾತ್ರಿಗಳಾದ ದಿ.ಕೃಷ್ಣ ನಾಯ್ಕ್ ಮತ್ತು ಶ್ರೀಮತಿ ಗಿರಿಜಾ
ಹಾಗೂ ಪೇತ್ರಿ ನಿವಾಸಿಯಾದ ನಿವೃತ್ತ ಕೆ ಇ ಬಿ ಸಹಾಯಕ ಅಭಿಯಂತರರಾದ ಸಂಜೀವ ಅಮೀನ್ ಹಾಗೂ ಶ್ರೀಮತಿ ಪಾರ್ವತಿ ಎಸ್ ಅಮೀನ್ ಇವರ ಮೊಮ್ಮಗಳಾಗಿದ್ದಾಳೆ

