Home » ದಶಮ ಸಂಭ್ರಮದ ಕಾರ್ಯಕ್ರಮವನ್ನ ಉದ್ಘಾಟಿಸಿದ ಶಾಸಕ ಎ.ಕಿರಣ್ ಕೊಡ್ಗಿ
 

ದಶಮ ಸಂಭ್ರಮದ ಕಾರ್ಯಕ್ರಮವನ್ನ ಉದ್ಘಾಟಿಸಿದ ಶಾಸಕ ಎ.ಕಿರಣ್ ಕೊಡ್ಗಿ

by Kundapur Xpress
Spread the love

ಕೋಟ :  ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಂತ ಥೀಮ್ ಪಾರ್ಕ್ ನಲ್ಲಿ ಛಾಯ ತರಂಗಿಣಿ ಸಂಗೀತ ಶಾಲೆ ಕೋಟ ಹರ್ತಟ್ಟು ಇವರ ದಶಮ ಸಂಭ್ರಮ 2015-2025 ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿ ಕಾರ್ಯಕ್ರಮವನ್ನ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ನುಡಿಗಳ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಂದ.ಸಿ.ಕುಂದರ್ ಪ್ರವರ್ತಕರು ಗೀತಾನಂದ ಪೌಂಡೇಶನ್ ಇವರು ವಹಿಸಿದರು.

ವೇದಿಕೆಯಲ್ಲಿ ಸತೀಶ್ ಭಾರಿಕೆರೆ ಅಧ್ಯಕ್ಷರು ಕೋಟತಟ್ಟು ಗ್ರಾಮ ಪಂಚಾಯತ್, ಸತೀಶ್ ಕುಂದರ್ ಅಧ್ಯಕ್ಷರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಮಣೂರು,, ರಂಗನಾಥ್ ಉಡುಪ ನಿವೃತ್ತ ವ್ಯವಸ್ಥಾಪಕರು ವ್ಯವಸಾಯ ಸೇವಾ ಸಹಕಾರಿ ಸಂಘ ಸಿದ್ದಾಪುರ, ಶ್ರೀಕಾಂತ್ ನಾಯಕ್ ಉದ್ಯಮಿ ನಾಯಕ್ ಟ್ರೇಡರ್ಸ್ ಸಿದ್ದಾಪುರ, ಶ್ರೀಮತಿ ಭಾಗ್ಯ ವಾದಿರಾಜ್ ಸಾಂಸ್ಕೃತಿಕ ಚಿಂತಕರು ಮಾಜಿ ವ್ಯವಸ್ಥಾಪಕರು ಸೇವಾ ಸಂಘ ಶಿಶು ಮಂದಿರ ಕೋಟ,, ಶ್ರೀಮತಿ ಭಾರತಿ ವಿ.ಮಯ್ಯ ಸಾಂಸ್ಕೃತಿಕ ಚಿಂತಕರು ಸಂಚಾಲಕರು ಸ್ನೇಹಕೋಟ ಕೋಟ,, ವಿದ್ವಾನ್ ಮಧೂರು ಪಿ ಬಾಲಸುಬ್ರಮಣ್ಯಂ, ಕರ್ನಾಟಕ ಕಲಾಚಾರ್ಯ ಮತ್ತು ಕಲಾ ಶ್ರೀ ಪುರಸ್ಕೃತರು ಸಂಗೀತ ವಿದ್ವಾಂಸರು ಉಡುಪಿ, ಶ್ರೀಮತಿ ವಿದುಷಿ ಶರ್ಮಿಳರಾವ್ ನಾದಶ್ರೀ ಪುರಸ್ಕೃತರು ವೈಯಲಿನ್ ವಾದಕರು ಉಡುಪಿ,, ಹಾಗೂ ಗ್ರಾಮ ಪಂಚಾಯಿತಿನ ಸದಸ್ಯರು ಪ್ರಮುಖರು ಮತ್ತು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

 

Related Articles

error: Content is protected !!