Home » ತಂದೆ ಆತ್ಮಹತ್ಯೆ : ರಕ್ಷಿಸಲು ಹೋದ ಮಗ ಮೃತ್ಯು ಪತ್ನಿಯ ರಕ್ಷಣೆ
 

ತಂದೆ ಆತ್ಮಹತ್ಯೆ : ರಕ್ಷಿಸಲು ಹೋದ ಮಗ ಮೃತ್ಯು ಪತ್ನಿಯ ರಕ್ಷಣೆ

by Kundapur Xpress
Spread the love
ಕುಂದಾಪುರ : ಕೋಟ ಸಮೀಪದ ತೆಕ್ಕಟ್ಡೆಯಲ್ಲಿ ಇಂದು ಮುಂಜಾನೆ ನಡೆದ ದುರದೃಷ್ಟಕರ ಘಟನೆಯೊಂದರಲ್ಲಿ ಬಾವಿಗೆ ಹಾರಿದ ತಂದೆ ಮಗ ಸಾವೀಗಿಡಾಗಿದ್ದು ಪತ್ನಿಯನ್ನು ಸಾರ್ವಜನಿಕರು ರಕ್ಷಿಸಿದ ಘಟನೆ ನಡೆದಿದೆ
ತೆಕ್ಕಟ್ಟೆಯ ಕಂಚುಕಾರ ಬೆಟ್ಟು ನಿವಾಸಿಯಾದ ಮಾಧವ ದೇವಾಡಿಗ (56 ವರ್ಷ) ಹಾಗೂ ಮಗ ಪ್ರಸಾದ್‌ (21 ವರ್ಷ) ಮೃತಪಟ್ಟ ದುರ್ದೈವಿಗಳು ಮಾಧವ ದೇವಾಡಿಗರ ಪತ್ನಿ ತಾರಾ ಎಂಬವರನ್ನು ಸಾರ್ವಜನಿಕರು ರಕ್ಷಿಸಿದ್ದು ಕೋಟೇಶ್ವರದ ಎನ್‌ ಆರ್‌ ಆಚಾರ್ಯ ಆಸ್ಪತೆಗೆ ದಾಖಲಿಸಲಾಗಿದೆ
ಘಟನೆ ವಿವರ :
ಮಾಧವ ದೇವಾಡಿಗ ಎಂಬವರು ಸಾಲಭಾಧೆಯಿಂದ ಬಳುಲುತ್ತಿದ್ದು ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದು ತಂದೆಯ ರಕ್ಷಣೆಗಾಗಿ ಮಗನೂ ಬಾವಿಗೆ ಹಾರಿ ಮೃತಪಟ್ಟಿದ್ದಾನೆ ಬೆಳಿಗ್ಗೆ ಎದ್ದ ಪತ್ನಿ ತಾರಾ ಮನೆಯಲ್ಲಿ ಗಂಡ ಮಗ ಇಲ್ಲದ್ದನ್ನು ನೋಡಿ ಬಾವಿ ನೋಡಿ ಕಿರುಚಾಡಿ ಬಾವಿಗೆ ಹಾರಿದ್ದಾಳೆ ತಾರಾಳ ಕಿರುಚಾಟದಿಂದ ಆಸುಪಾಸಿನವರು ಆಗಮಿಸಿ ತಾರಾಳನ್ನು ರಕ್ಷಿಸಿ ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ
ನಂತರ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದ್ದು ಬಾವಿಯಲ್ಲಿದ್ದ ತಂದೆ ಮಗನ ಮೃತದೇಹವನ್ನು ಕುಂದಾಪುರ ನಗರದ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ 
ಮಾಧವ ದೇವಾಡಿಗ ಎಂಬವರು ಡೆತ್‌ ನೋಟ್‌ ಬರೆದಿಟ್ಟಿದ್ದು ” ಬಡ್ಡಿ ಕಟ್ಟಿ ಸಾಕಾಗಿದೆ , ನನ್ನ ಸಾವಿಗೆ ಯಾರೂ ಕಾರಣವಲ್ಲ” ಎಂದು ಬರೆದಿಟ್ಟಿದ್ದಾರೆ ಕೋಟ ಪೊಲೀಸರು ಆಗಮಿಸಿ ಶವ ಮಹಜರು ನಡೆಸಿ ತನಿಖೆ ಕೈಗೊಂಡಿದ್ದಾರೆ
 

Related Articles

error: Content is protected !!