Home » ಸಿಗರೇಟ್‌ ಸೇದಿರುವ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌
 

ಸಿಗರೇಟ್‌ ಸೇದಿರುವ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌

ಬಾಲಕನಿಂದ 120 ಗ್ರಾಂ ಚಿನ್ನ ದೋಚಿದ ಆರೊಪಿಗಳು

by Kundapur Xpress
Spread the love

ಕೊಪ್ಪಳ: ಅಪ್ರಾಪ್ತ ಬಾಲಕನೋರ್ವನಿಗೆ ಸಿಗರೇಟ್‌ ಸೇದಲು ಕಲಿಸಿ, ಅದರ ವೀಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿ ಸುಮಾರು 120 ಗ್ರಾಂ ಚಿನ್ನ ದೋಚಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಬಸವರಾಜ್‌ ಅಂಗಡಿ ಮತ್ತು ನವೀನ್‌ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ ಕುಷ್ಟಗಿ ಪೊಲೀಸರು, ಆರೋಪಿಗಳಿಂದ 120 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲು ಅಪ್ರಾಪ್ತ ಬಾಲಕನಿಗೆ ಆರೋಪಿಗಳು ಸಿಗರೇಟ್‌ ಸೇದುವುದನ್ನು ಕಲಿಸಿ, ಬಳಿಕ ಅದನ್ನು ವಿಡಿಯೋ ಮಾಡಿಟ್ಟು ಅದನ್ನು ತಂದೆ-ತಾಯಿಗೆ ತೋರಿಸುತ್ತೇವೆ ಎಂದು ಬೆದರಿಕೆಯೊಡ್ಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ.

ಆರೋಪಿಗಳ ಬೆದರಿಕೆಗೆ ಹೆದರಿದ ಬಾಲಕ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಒಂದೊಂದಾಗಿ ತೆಗೆದುಕೊಂಡು ಹೋಗಿ ಆರೋಪಿಗಳಿಗೆ ನೀಡಿದ್ದಾನೆ. ಸುಮಾರು 120 ಗ್ರಾಂ ಚಿನ್ನವನ್ನು ಬಾಲಕ ಆರೋಪಿಗಳಿಗೆ ನೀಡಿರುವುದು ಎಂದು ತನಿಖೆಯಿಂದ ತಿಳಿದು ಬಂದಿದೆ.ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗುತ್ತಿರುವ ಬಗ್ಗೆ ಅನುಮಾನಗೊಂಡ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕುಷ್ಟಗಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Related Articles

error: Content is protected !!