23
ಮಂಗಳೂರು : ಡಿಜಿಟಲ್ ಗೋಲ್ಡ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ₹10.55 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ದೂರುದಾರರಿಗೆ ಇನ್‌ಸ್ಟಾಗ್ರಾಂ ಮೂಲಕ ಬಂದ ಲಿಂಕ್ ಆಧರಿಸಿ ಅವರು ಸಂಬಂಧಿತ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು.
ಬಳಿಕ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹10.55 ಲಕ್ಷವನ್ನು ವರ್ಗಾವಣೆ ಮಾಡಲಾಗಿದೆ.ಹೂಡಿಕೆ ಮಾಡಿದ ಬಳಿಕ ಆ್ಯಪ್‌ನಲ್ಲಿ ಸುಮಾರು ₹60 ಲಕ್ಷ ಮೊತ್ತ ಇರುವಂತೆ ತೋರಿಸಲಾಗಿತ್ತು. ಆದರೆ ಆ ಮೊತ್ತವನ್ನು ಹಿಂತೆಗೆದುಕೊಳ್ಳಲು ಯತ್ನಿಸಿದಾಗ ಸಾಧ್ಯವಾಗದೆ ವಂಚನೆ ನಡೆದಿರುವುದು ತಿಳಿದುಬಂದಿದೆ.
ಈ ಕುರಿತು ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

