Home » ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರು :ಪೊಲೀಸರ ವಶಕ್ಕೆ
 

ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರು :ಪೊಲೀಸರ ವಶಕ್ಕೆ

by Kundapur Xpress
Spread the love

ಗಂಗೊಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಗಂಗೊಳ್ಳಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ನಾಡ ಗ್ರಾಮದ ಕೊಡಗುಂಜಿ ಬ್ರಿಡ್ಜ್‌ ಬಳಿ ನಡೆದಿದೆ.

ಮೇ 7ರಂದು ಪವನ್ ನಾಯಕ್‌, ಪೊಲೀಸ್ ಉಪನಿರೀಕ್ಷಕರು (ಕಾನೂನು ಮತ್ತು ಸುವ್ಯವಸ್ಥೆ), ಗಂಗೊಳ್ಳಿ ಪೊಲೀಸ್ ಠಾಣೆ ಅವರು ತ್ರಾಸಿ ಭಾಗದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಕೊಡಗುಂಜಿ ಬ್ರಿಡ್ಜ್‌ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಜುಗಾರಿಯಲ್ಲಿ ತೊಡಗಿದ್ದ ಐವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರು ರತ್ನಾಕರ ಕಾಂಚನ್‌ (55), ಕಳುವಿನ ಬಾಗಿಲು, ನಾಡಾ ಗ್ರಾಮ , ಸಂತೋಷ್ ಪೂಜಾರಿ (46), ಒಕ್ಕೇರಿ, ಬಡಾಕೆರೆ ಗ್ರಾಮ, ರಾಘವೇಂದ್ರ (28), ಪಡುಕೋಣೆ ಚರ್ಚ್‌ ಬಳಿ, ನಾಡಾ ಗ್ರಾಮ, ರಾಜೇಶ್ ಪೂಜಾರಿ (42), ಮಹಾವಿಷ್ಣು ದೇವಸ್ಥಾನದ ಹತ್ತಿರ, ಪಡುಕೋಣೆ, ಹಡವು ಗ್ರಾಮ, ಬಾಬು ಮೊಗವೀರ (50), ಪಡುಕೋಣೆ ಹೈಸ್ಕೂಲ್‌ ಹತ್ತಿರ, ನಾಡಾ ಗ್ರಾಮ.

ಪೊಲೀಸರು ಸ್ಥಳದಿಂದ ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಲಾಗಿದ್ದ ಪಾಲಿಥಿನ್ ಚೀಲ, ವಿವಿಧ ಜಾತಿಯ ಇಸ್ಪೀಟ್ ಎಲೆಗಳು ಹಾಗೂ ₹13,020 ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

Related Articles

error: Content is protected !!