ಕುಂದಾಪುರ : ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ 2021-22 ನೇ ಸಾಲಿನ ಉತ್ತಮ ಕಾರ್ಯ ನಿರ್ವಹಣೆಗಾಗಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಲಭಿಸಿದೆ ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ನೆಲೆಯಲ್ಲಿ ಕೇಂದ್ರ ಸಹಕಾರಿ ಬಾಂಕ್‌ನಿಂದ “ಅ” ವರ್ಗದ ಸಹಕಾರಿ ಸಂಘಗಳಲ್ಲಿ ಸತತ 5 ವರ್ಷ ದ್ವಿತೀಯ ಪ್ರಶಸ್ತಿ ದೊರೆತಿದೆ
ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘವು ತನ್ನ ಸದಸ್ಯರಿಗೆ ಕೃಷಿ ಸಾಲ ಕೃಷಿಯೇತರ ಮಧ್ಯಮಾವಧಿ ಸಾಲ ವಾಹನ ಸಾಲ ತುರ್ತು ಅವಶ್ಯಕತೆಗಳಿಗಾಗಿ ಇತರ ಉದ್ದೇಶಗಳ ಬಾಬ್ತು ಸಾಲ ಚಿನ್ನಾಭರಣಗಳ ಈಡಿನ ಸಾಲ ಠೇವಣಿ ಸಾಲ ಹಾಗೂ ಸ್ವ ಸಹಾಯ ಗುಂಪುಗಳಿಗೆ ಸಾಲ ನೀಡುತ್ತಾ ಬಂದಿದ್ದು ಸದಸ್ಯರ ಸಾಲ ವಸೂಲಾತಿಯಲ್ಲಿ ಶೇ.100 ರ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನಿರಂತರ 25 ಬಾರಿ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದು ಸಂಘದ ಉಪಾಧ್ಯಕ್ಷರಾದ ಕೆ.ವಿಕಾಸ್ ಹೆಗ್ಡೆ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀಮತಿ ಸಬಿತಾ ರವರು ತಿಳಿಸಿದ್ದು ಸಂಘದ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಮೇಲಿನ ಎಲ್ಲಾ ಪ್ರಶಸ್ತಿಗಳು ಲಭಿಸಲು ಕಾರಣ ಎಂದು ಅವರು ತಿಳಿಸಿದ್ದಾರೆ

