487
ಕುಂದಾಪುರ : ಕುಂದಾಪುರ ನಗರದ ಶ್ರೀ ರಾಮಕ್ಷತ್ರಿಯ ಯುವಕ ಮಂಡಳಿಯು 60ನೇ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಲೋಗೋವನ್ನು ಬಿಡುಗಡೆಗೊಳಿಸಲಾಯಿತು ಶ್ರೀ ರಾಮಕ್ಷತ್ರಿಯರ ಸಂಘದ ಉಪಾಧ್ಯಕ್ಷರಾದ ದೇವರಾಯ ಬಾಣನಮನೆಯವರು ಲೋಗೊ ಬಿಡುಗಡೆಗೊಳಿಸಿ ಶುಭ ಹಾರೈಸಿದರು ಇದೇ ಸಂದರ್ಭದಲ್ಲಿ ರಾಮಕ್ಷತ್ರಿಯ ಸಮಾಜದ ವೆಬ್ ಸೈಟಿಗೆ ಚಾಲನೆ ನೀಡಿ ಮುಂದಿನ ಕಾರ್ಯ ಯೋಜನೆಯ ಕುರಿತು ರಾಜೇಶ್ ಪಡುಕೇರಿ ಮಾಹಿತಿ ನೀಡಿದರು
ಸಮಾರಂಭದಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಪಡುಕೇರಿ ಕಾರ್ಯದರ್ಶಿ ಯು.ಅನಿಲ್ ಕುಮಾರ್ ನಿಯೋಜಿತ ಅಧ್ಯಕ್ಷ ನಾಗರಾಜ್ ದಫೇದಾರ್ ಮಾಜಿ ಅಧ್ಯಕ್ಷ ಪ್ರಭಾಕರ್ ರಾಮಕ್ಷತ್ರಿಯರ ಸಂಘದ ಕಾರ್ಯದರ್ಶಿ ಕೆ.ನಾಗರಾಜ್ ನಾಯ್ಕ್ ಹಾಗೂ ಕೋಶಾಧಿಕಾರಿ ಸುರೇಶ್ ಕೆಳಮನೆ ಉಪಸ್ಥಿತರಿದ್ದರು
ಶ್ರೀರಾಮ್ ಹೆಗ್ಡೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್ ಸ್ವಾಗತಿಸಿ ವಂದಿಸಿದರು

