Home » ಎನ್.ಎಸ್.ಎಸ್. ಶಿಬಿರ: ಕಾನೂನು ಅರಿವು ಕಾರ್ಯಕ್ರಮ
 

ಎನ್.ಎಸ್.ಎಸ್. ಶಿಬಿರ: ಕಾನೂನು ಅರಿವು ಕಾರ್ಯಕ್ರಮ

by Kundapur Xpress
Spread the love

ಕುಂದಾಪುರ : ಭಾರತೀಯ ಸಂವಿಧಾನ ಬದುಕಿನ ಕೈಪಿಡಿಯಾಗಬೇಕು. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದುಕೊಳ್ಳಬೇಕು. ದಿನನಿತ್ಯದ ಬದುಕಿನಲ್ಲಿ ಕಾನೂನಿನ ಅರಿವು ಅತ್ಯಂತ ಅಗತ್ಯ ಎಂದು ಕುಂದಾಪುರದ ನ್ಯಾಯವಾದಿ ಶ್ರೀ ಸಂದೇಶ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಶ್ರೀ ವಿನಾಯಕ ಸಭಾಭವನದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಾನೂನು ಅರಿವು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಮಾತನಾಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಯ್ಕಾಡಿಯ ಬಜಾಜ್ ಎಲಿಯನ್ಸ್ ಡೆವಲಪ್ಮೆಂಟ್ ಆಫೀಸರ್ ಶ್ರೀ ಸುದರ್ಶನ್ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಶ್ರೀ ರಮೇಶ್ ಮೊಗವೀರ ಗುಡ್ಡೆಯಂಗಡಿ, ಶಾರದೋತ್ಸವ ಸಮಿತಿಯ ಸದಸ್ಯ ಶ್ರೀ ಸುರೇಶ್ ಪೂಜಾರಿ ಹುಣ್ಸೆಮಕ್ಕಿ, ಸ.ಹಿ.ಪ್ರಾ. ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಮ್.ಸಿ. ಸದಸ್ಯರಾದ ಶ್ರೀಮತಿ ಪವಿತ್ರ ಹಾಗೂ ಶ್ರೀಮತಿ ಶಾಂತ, ಶ್ರೀ ದಿನೇಶ್ ಪೂಜಾರಿ ಹಳ್ನಿರು, ಶ್ರೀ ಶರತ್ ಕುಲಾಲ್ ಯಡಾಡಿ ಹಾಗೂ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಮ್ ಮೊಗವೀರ, ಶ್ರೀ ಮಂಜುನಾಥ್ ಕುಲಾಲ್ ಗುಡ್ಡೆಯಂಗಡಿ ಹಾಗೂ ಕಾಲೇಜಿನ ಗಣಕಶಾಸ್ತç ವಿಭಾಗದ ಪ್ರಾಧ್ಯಾಪಕಿ ಶಿವಾನಿ ಅಡಿಗ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಸ್ವಯಂಸೇವಕರಾದ ವಿಕಾಸ್ ಸ್ವಾಗತಿಸಿ, ಸೌರವ ವಂದಿಸಿ, ಚಿರಂತ್ ಕಾರ್ಯಕ್ರಮ ನಿರ್ವಹಿಸಿದರು.

 

Related Articles

error: Content is protected !!