48
ಕುಂದಾಪುರ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ ಭಿ..ಪಢಾಯಿ ಭಿ. ತರಬೇತಿ ಕಾರ್ಯಕ್ರಮಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಚಾಲನೆ ನೀಡಿ ಗ್ರಾಮೀಣ ಭಾಗದ ವಿವಿಧ ಸಕ್ಷಮ್ ಅಂಗನವಾಡಿ ಕೇಂದ್ರಗಳಿಗೆ ದೂರದರ್ಶನ (ಟೆಲಿವಿಜನ್ ) ಹಾಗೂ ಶಾಲಾಪೂರ್ವ ಶಿಕ್ಷಣದ ಕಿಟ್ ನ್ನು ವಿತರಿಸಿ ಬಾಲ ಚಟುವಟಿಕೆಯನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಸರ್ಕಾರದಿಂದ ಕೂಡ ಮಾಡಿದ ದೂರದರ್ಶನದ ಪ್ರಾಯೋಜವನ್ನ ಉತ್ತಮ ರೀತಿಯಿಂದ ಅಂಗನವಾಡಿ ಪುಟಾಣಿಗಳಿಗೆ ಮಾಹಿತಿ ನೀಡುವಂತೆ ಶಾಸಕರು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಲಲಿತ, ಪ್ರಭಾವತಿ ಶೆಟ್ಟಿ, ಸುಜೇಯ, ನಿವೇದಿತಾ, ಸುಜಾತ,ಶಕುಂತಲಾ,ಸಾಕು ,ಸುಮಾ, ಹಾಗೂ ಪೋಷಣ ಅಭಿಯಾನ ತಾಲೂಕು ಸಂಯೋಜಕರಾದ ಮಂಜುನಾಥ್, ಹಾಗೂ ಅಂಗನವಾಡಿ ಕಾರ್ಯಕರ್ತರು, ಪೋಷಕರು, ಉಪಸ್ಥಿತರಿದ್ದರು.

