ಉಡುಪಿ : ಮಹಿಳೆ ಒಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ ಕಳೆದ ಸೋಮವಾರ ಕುಂಜಾರುಗಿರಿ ಸಮೀಪದ ಪಾಜಕದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಬರುತ್ತಿದ್ದ ಬ್ರಾಹ್ಮಣ ತೋಟ ನಿವಾಸಿಯಾದ ಶಕುಂತಲಾ ಜಿ ಭಟ್ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಇಬ್ಬರು ಆರೋಪಿಗಳು ಸುಲಿಗೆ ಮಾಡಿದ್ದರು
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ಬಿ ಸಿ ರೋಡ್ ನಿವಾಸಿಯಾದ ಮೊಹಮ್ಮದ್ ರಫಿಕ್ ಹಾಗೂ ಸುರತ್ಕಲ್ ಚೊಕ್ಕಬೆಟ್ಟು ನಿವಾಸಿಯಾದ ಸಾಧಿಕ್ ಎಂಬವರನ್ನು ಪೊಲೀಸರು ಬಂಧಿಸಿದ್ದು ಅವರಿಂದ ಎರಡು ಬೈಕ್ ಮೂರು ಮೊಬೈಲ್ ಹಾಗೂ ಎರಡು ಬಟನ್ ಚೂರಿಗಳನ್ನು ವಶಪಡಿಸಿಕೊಳ್ಳಲಾಗಿದೆ