Home ಕರಾವಳಿ ಸುದ್ದಿಕಾಳಾವರ ಪದವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ.

ಕಾಳಾವರ ಪದವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ.

– ಯೋಗ ಒಂದು ಜೀವನ ವಿಜ್ಞಾನ

by Kundapur Xpress

ಇಂದಿನ ಡಿಜಿಟಲ್ ದಿನ ಮಾನಸದಲ್ಲಿ ಜ್ಞಾನದ ಮತ್ತು ಸಮಯದ ಅಭಾವವಿಲ್ಲ ಬದಲಾಗಿ ಏಕಾಗ್ರತೆಯ ಅಭಾವ ಇದೆ. ಒಳಗಣ್ಣನ್ನು ತೆರೆದು ಅಂತರಂಗದ ಕಡೆಗೆ ಹಾಯಿಸಿದರೆ ನನ್ನನ್ನೇ ನಾನು ಗೆಲ್ಲಬಹುದು. ಯೋಗಭ್ಯಾಸ ಮಾಡುವುದರಿಂದ ಆರೋಗ್ಯವಂತರಾಗುವುದರೊಂದಿಗೆ ನೆಮ್ಮದಿಯ ಬದುಕನ್ನು ಹೊಂದಬಹುದೆ0ದು ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ವಸ್ಥವೃತ್ತ ಮತ್ತು ಯೋಗ ಸಹಪ್ರಾಧ್ಯಾಪಕರಾದ ಡಾ. ಪ್ರೀತಿಕಾ ಶೆಟ್ಟಿ ನುಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಾಗರಾಜ ವೈದ್ಯ ಎಂ. ಯೋಗವನ್ನು ಅನೂಚಾನವಾಗಿ ಅನುಷ್ಠಾನ ಮಾಡುವುದರಿಂದ ಸದೃಢ ಆರೋಗ್ಯ ಸಾದ್ಯ ಎಂದರು.
ಅನುಷಾ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಉದಯ ಶೆಟ್ಟಿ ಕೆ. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ನಾಗೇಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರತಿಮಾ ವಂದಿಸಿದರು. ನಂತರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ರಾಜೇಶ್ ಮತ್ತು ಚಿನ್ಮಯಿ ಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

Related Articles