Home » ಗೋವಿನ ರುಂಡ ಪತ್ತೆ : ನದಿಯಲ್ಲಿ ಬಂದ ಶಂಕೆ
 

ಗೋವಿನ ರುಂಡ ಪತ್ತೆ : ನದಿಯಲ್ಲಿ ಬಂದ ಶಂಕೆ

by Kundapur Xpress
Spread the love

ಕಾರ್ಕಳ : ನದಿ ಬದಿ ಹಸುವಿನ ರುಂಡ ಭಾನುವಾರ ಪತ್ತೆಯಾದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ದುರ್ಗ ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಮಲೆಬೆಟ್ಟು-ಬೆದ್ರಪಲ್ಕೆ ಬಳಿ ನಡೆದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನದಿ ಬಳಿ ಭಾನುವಾರ ರಾತ್ರಿ ಸ್ಥಳೀಯರು ಗೋವಿನ ರುಂಡ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಇದು ಮುಂಡ್ಲಿಗೆ ಹತ್ತಿರದ ಸ್ವರ್ಣಾ ನದಿಯಿಂದ ಹರಿದು ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಳ, ಕಡಾರಿ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

 

Related Articles

error: Content is protected !!