Home » ಐಸಿಸ್‌ ಸ್ಲೀಪರ್‌ ಸೆಲ್‌ ಸದಸ್ಯರಿಬ್ಬರ ಸೆರೆ
 

ಐಸಿಸ್‌ ಸ್ಲೀಪರ್‌ ಸೆಲ್‌ ಸದಸ್ಯರಿಬ್ಬರ ಸೆರೆ

by Kundapur Xpress
Spread the love

ಹೊಸದಿಲ್ಲಿ : ನಿಷೇಧಿತ ಐಸಿಸ್ ಭಯೋತ್ಪಾದಕ ಸಂಘಟನೆಯ ಸ್ವೀಪರ್ ಸೆಲ್ ಸದಸ್ಯರಾಗಿ ಗುರುತಿಸಲ್ಪಟ್ಟ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಂಧಿಸಿದೆ. ಈ ಬಂಧನಗಳು ಮಹಾರಾಷ್ಟ್ರದ ಪುಣೆಯಲ್ಲಿ 2023ರಲ್ಲಿ ನಡೆದ ಸುಧಾರಿತ ಸ್ಫೋಟಕ ಸಾಧನಗಳ(ಐಇಡಿ) ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದೆ ಎಂದು ಎನ್ ಐ ಎ ತಿಳಿಸಿದೆ 

ಅಬ್ದುಲ್ಲಾ ಫಯಾಜ್ ಶೇಖ್ ಡಯಾಪರ್ವಾಲಾ ಮತ್ತು ತಲ್ಲಾ ಖಾನ್ ಎಂದು ಗುರುತಿಸಲ್ಪಟ್ಟ ಇಬ್ಬರು ವ್ಯಕ್ತಿಗಳು, ಇಂಡೋನೇಷ್ಯಾದ ಜಕಾರ್ತಾಗೆ ಮರಳಲು ಪ್ರಯತ್ನಿಸಿದಾಗ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಬ್ಯೂರೋ ತಡೆಹಿಡಿದರು. ನಂತರ ಎನ್‌ಐಎ ತಂಡ ಅವರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ. ಇಬ್ಬರು ಆರೋಪಿಗಳ ಬಂಧನಕ್ಕೆ ಕಾರಣವಾಗುವ ಮಾಹಿತಿಗಾಗಿ ಎನ್‌ಐಎ ಈ ಹಿಂದೆ ತಲಾ 3 ಲಕ್ಷ ರೂ. ನಗದು ಬಹುಮಾನ ಘೋಷಿಸಿತ್ತು

 

Related Articles

error: Content is protected !!