Home » ‌ರಿಕ್ಕಿ ರೈ ಶೂಟೌಟ್ : ತನಿಖೆ ಚುರುಕು
 

‌ರಿಕ್ಕಿ ರೈ ಶೂಟೌಟ್ : ತನಿಖೆ ಚುರುಕು

by Kundapur Xpress
Spread the love

ರಾಮನಗರ : ಮಾಜಿ ಭೂಗತ ಡಾನ್ ದಿ.ಮುತ್ತಪ್ಪ ರೈಯವರ ಮಗ ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣದ ತನಿಖೆ ಚುರುಕು ಗೊಂಡಿದೆ. ದುಷ್ಕರ್ಮಿಯ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈ ಅವರನ್ನು ಭೇಟಿಯಾಗಿ ರಾಮನಗರ ಉಪವಿಭಾಗ ಡಿವೈಎಸ್ಪಿ ಪಿ. ಶ್ರೀನಿವಾಸ್ ಭಾನುವಾರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

ಪೊಲೀಸರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ. ರಿಕ್ಕಿ ರೈ ಅವರು ರಾಕೇಶ್ ಮಲ್ಲಿ ಮತ್ತು ನನ್ನ ಚಿಕ್ಕಮ್ಮ ಅನುರಾಧ ರೈ ಅವರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ಪುನರುಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿದೇಶದಿಂದ ಬೆಂಗಳೂರಿಗೆ ಬಂದಾಗ ಸದಾಶಿವನಗರ ಹಾಗೂ ಬಿಡದಿಯಲ್ಲಿ ಹೆಚ್ಚಾಗಿ ಇರುತ್ತೇನೆ. ಬಿಡದಿಯಿಂದ ಸದಾಶಿವನಗರದ ಮನೆಗೆ ಹೋಗುವಾಗ ಅಟ್ಯಾಕ್ ಮಾಡಲಾಗಿದೆ. ನನ್ನ ಸ್ನೇಹಿತರು ಮತ್ತು ಚಾಲಕ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ರಿಕ್ಕಿ ರೈ ತಿಳಿಸಿದ್ದಾರೆ. ಇದೇ ವೇಳೆ ರಿಕ್ಕಿ ಅವರ ಬಿಡದಿ ನಿವಾಸದಲ್ಲಿ ಭಾನುವಾರ ಪೊಲೀಸರು ಪರಿಶೀಲನೆ ನಡೆಸಿದರು.

 

Related Articles

error: Content is protected !!