503
ಬ್ರಹ್ಮಾವರ: ಕುಂದಾಪುರದ ಶಕುಂತಳಾ ಎಂಬವರು ಬ್ರಹ್ಮಾವರದಲ್ಲಿ ನಡೆಯುವ ಮದುವೆಗೆ ಬಸ್‌ನಲ್ಲಿ ತೆರಳುತ್ತಿರುವಾಗ ಅವರು ಧರಿಸಿದ್ದ 35 ಗ್ರಾಂನ ಗೋಧಿಮಣಿಯ ಚಿನ್ನದ ಸರ ಕಳವಾದ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬ್ರಹ್ಮಾವರದಲ್ಲಿ ನಡೆಯುವ ಮದುವೆಗೆ ಬಸ್‌ನಲ್ಲಿ ತೆರಳಿದ್ದು ಬ್ರಹ್ಮಾವರ ಬಸ್ ಸ್ಟ್ಯಾಂಡ್ ದಾಟಿದಾಗ ಎದ್ದು ನಿಂತು ಬಾಗಿಲ ಬಳಿ ಬಂದಿದ್ದರು. ಈ ಸಂದರ್ಭ ಬಹಳಷ್ಟು ಮಂದಿ ಮಹಿಳೆಯರು ಇವರ ಹಿಂದೆ ಮತ್ತು ಮುಂದೆ ಇದ್ದು ಇಬ್ಬರು ಅಪರಿಚಿತ ಮಹಿಳೆಯರಿದ್ದರು. ಎಸ್. ಎಂ.ಎಸ್, ಬಸ್ಟ್ಯಾಂಡ್‌ನಲ್ಲಿ ಇಳಿದು ಸಭಾಂಗಣಕ್ಕೆ ತೆರಳುತ್ತಿರುವಾಗ ಧರಿಸಿದ್ದ 35 ಗ್ರಾಂನ ಗೋಧಿಮಣಿಯ ಚಿನ್ನದ ಸರ ಕಣ್ಮರೆಯಾಗಿದ್ದು ಅವರ ಗಮನಕ್ಕೆ ಬಂದಿದೆ

