223
ಉಡುಪಿ ಪ್ರವಾಸಿಯ ಚಿನ್ನಾಭರಣಗಳು ಕಳವು
ಉಡುಪಿ: ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆಂದು ನಗರಕ್ಕೆ ಆಗಮಿಸಿದ ಪ್ರವಾಸಿ ಒಬ್ಬರ ಬ್ಯಾಗಿನಿಂದ ಚಿನ್ನಾಭರಣ ಕಳೆಯುಗೈದ ಘಟನೆ ಶುಕ್ರವಾರ ಉಡುಪಿಯಲ್ಲಿ ನಡೆದಿದೆ ಆಂಧ್ರ ಪ್ರದೇಶ ರಾಜ್ಯದ ಹೈದರಾಬಾದ್ ಮೂಲದ ಪದ್ಮಜ ಎಂಬವರು ಧಾರ್ಮಿಕ ಕ್ಷೇತ್ರಗಳ ಭೇಟಿಯ ಸಲುವಾಗಿ ಉಡುಪಿಗೆ ಆಗಮಿಸಿ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು ಶುಕ್ರವಾರ ಬೆಳಗ್ಗೆ ಶ್ರೀ ಕೃಷ್ಣ ಮಠಕ್ಕೆ ತೆರಳಿದ್ದು ಆ ಸಮಯದಲ್ಲಿ ಹ್ಯಾಂಡ್ ಬ್ಯಾಗಿನಲ್ಲಿದ್ದ ಚಿನ್ನದ ಆರು ಬಳೆ ಹಾಗೂ ಚಿನ್ನದ ಸರ ಒಟ್ಟು 142 ಗ್ರಾಂ ತೂಕದ 8,50,000 ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ

