Home ಶಿಕ್ಷಣಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

by Kundapur Xpress

ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ -1 ಹಾಗೂ 2 ಮತ್ತು ರೋವರ್ಸ್-ರೇಂಜರ್ಸ್, ಘಟಕದ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅಕ್ಟೋಬರ್ 02ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜೀವನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ರೋವರ್ ಸ್ಕೌಟ್ ಲೀಡರ್ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮದ ಸಮನ್ವಯಕಾರರಾಗಿ ವಿದ್ಯಾರ್ಥಿಗಳ ಉಪನ್ಯಾಸದ ಕುರಿತು ಶ್ಲಾಘಿಸಿದರು.
ಎನ್.ಎಸ್.ಎಸ್. ಘಟಕ-1ರ ಕಾರ್ಯಕ್ರಮಾಧಿಕಾರಿ ಶ್ರೀ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಎನ್.ಎಸ್.ಎಸ್.ಘಟಕ-2ರ ಕಾರ್ಯಕ್ರಮಾಧಿಕಾರಿ ಪೂಜಾ ಕುಂದರ್ ಸ್ವಾಗತಿಸಿದರು. ರೇಂಜರ್ ಲೀಡರ್ ಜೋಸ್ಲಿನ್ ರೆನಿಟ್ ಡಿ ಅಲ್ಮೆಡಾ ವಂದಿಸಿದರು.
ವಿದ್ಯಾರ್ಥಿಗಳಾದ ಸುಜಯ್ ತೃತೀಯ ಬಿ.ಕಾಂ. (ಇ), ನಾಗಶ್ರೀ ಭಟ್ ತೃತಿಯ ಬಿ.ಕಾಂ. (ಬಿ), ಸುಪ್ರಜ್ ತೃತೀಯ ಬಿ.ಕಾಂ. (ಬಿ), ವೈಷ್ಣವಿ ಪ್ರಥಮ ಬಿಕಾಂ (ಬಿ), ಪ್ರತೀಕ್ಷಾ ಶೆಟ್ಟಿ ಪ್ರಥಮ ಬಿಬಿಎ ಹಾಗೂ ಮೇಘನಾ ಪ್ರಥಮ ಬಿ.ಕಾಂ. (ಬಿ) ಗಾಂಧೀಜಿ ಮತ್ತು ಶಾಸ್ತೀಜಿಯವರ ಕುರಿತು ಉಪನ್ಯಾಸ ನೀಡಿದರು. ರಶ್ಮಿತಾ ಹಾಗೂ ಸಹನಾ ತೃತೀಯ ಬಿಬಿಎ ಪ್ರಾರ್ಥಿಸಿದರು. ಸಿಂಚನ ದ್ವಿತೀಯ (ಬಿಸಿಎ) ಕಾರ್ಯಕ್ರಮ ನಿರೂಪಿಸಿದರು.

Related Articles