ಮೂಡ್ಲಕಟ್ಟೆ : ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ದಿನಾಂಕ 28 ಫೆಬ್ರವರಿ 2026ರಂದು ಅಂತರ್ ಕಾಲೇಜು ಕಲ್ಚರಲ್ ಮತ್ತು ಮ್ಯಾನೇಜ್ಮೆಂಟ್ ಫೆಸ್ಟ್ ” ಯುವ 2026 ” ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಕಲಾವಿದರಾದ ಶ್ರೀ ಪ್ರಕಾಶ್ ತುಮ್ಮಿನಾಡು ಇವರು ಆಗಮಿಸಿ ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದು ತುಂಬಾ ಸಂತೋಷ ನೀಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಂ ಐ ಟಿ ಕೆ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಇವರು ಉಪಸ್ಥಿತರಿದ್ದು ಇದು ಎಂಬಿಎ ಡಿಪಾರ್ಟ್ಮೆಂಟ್ ನಡೆಸಿಕೊಂಡು ಬರುತ್ತಿರುವ ಸತತ ಐದನೇ ಯಶಸ್ವಿ ಯುವ ಫೆಸ್ಟ್ ಎಂದು ಪ್ರಶಂಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐ ಎಂ ಜೆ ವಿದ್ಯಾ ಸಂಸ್ಥೆಗಳ ಡೈರೆಕ್ಟರ್ ಅಕಾಡೆಮಿಕ್ಸ್ ಆದ ಡಾ. ಎಸ್ ಎನ್ ಭಟ್ ಮಾತನಾಡಿ ಇಂಥ ಅವಕಾಶಗಳು ಸಿಗುವುದು ವಿರಳ, ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ಇವರು ಈ ಯುವ ಫೆಸ್ಟ್ ಪದವಿ ವಿದ್ಯಾರ್ಥಿಗಳ ಟ್ಯಾಲೆಂಟ್ ಅನ್ನು ಹೊರಹೊಮ್ಮಿಸಲು ಸುವರ್ಣಾವಕಾಶ, ಇಂದಿನ ಈ ಕಾರ್ಯಕ್ರಮದಲ್ಲಿ 23ಕ್ಕೂ ಹೆಚ್ಚಿನ ಡಿಗ್ರಿ ಕಾಲೇಜುಗಳು ಭಾಗವಹಿಸಿದದ್ದು ಸಂತೋಷ ದಾಯಕ ಎಂದರು. ಸಂಜೆನಡೆದ ಸಮಾರೋಪ ಸಮಾರಂಭದಲ್ಲಿ ಡಾ. ಎಸ್ ಎನ್ ಭಟ್, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ತ್ ರಾದ ಡಾ . ಮಂಜುನಾಥ್ ಲಮಾಣಿ, ಅಡ್ಮಿಷನ್ ಮುಖ್ಯಸ್ಥರಾದ ಶ್ರೀ ಕಿರಣ್ ಶೆಟ್ಟಿ, ಹಾಗೂ ವಿಭಾಗ ಮುಖ್ಯಸ್ಥರಾದ ಡಾ . ಸುಚಿತ್ರಾ ಪೂಜಾರಿ ಬಹುಮಾನ ವಿತರಿಸಿದರು.
ಇದರಲ್ಲಿ ಕಲ್ಚರಲ್ ಇವೆಂಟ್ ಯುವ ಪರಂಪರದ ಪ್ರಥಮ ಸ್ಥಾನಯಾಗಿ ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ ಹಾಗೂ ದ್ವಿತೀಯ ಸ್ಥಾನಿಯಾಗಿ ಭಂಡಾರಕರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ಕುಂದಾಪುರ ಇವರು ಗಳಿಸಿದರು. ಹಾಗೂ ಇತರ ಐದು ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬಹುಮಾನವನ್ನು ಗಳಿಸಿದರು. ಈ ಕಾರ್ಯಕ್ರಮವನ್ನು ಎಂಬಿಎ ವಿದ್ಯಾರ್ಥಿನಿಯರಾದ ಕುಮಾರಿ ಶಾಂಭವಿ ದ್ವಿತೀಯ ಎಂಬಿಎ ಹಾಗೂ ಕುಮಾರಿ ಅದಿತಿ ಪ್ರಥಮ ಎಂಬಿಎ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

