ತಕ್ಕಟ್ಟೆ :ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತಕ್ಕಟ್ಟೆ ಇಲ್ಲಿನ ವಾರ್ಷಿಕ ಕ್ರೀಡಾಕೂಟವನ್ನು ಶ್ರೀ ಸಂದೀಪ್ ಕುಮಾರ್ ಶೆಟ್ಟಿ ಶಿರಿಯಾರ ಎಂಟೆಕ್, ಕೆಮಿಕಲ್ ಇಂಜಿನಿಯರ್ ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಪೂರ್ತಿ, ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಪ್ರತಿಭೆಯನ್ನು ಮೆರೆಯಲು ಉತ್ತಮ ವೇದಿಕೆಯಾಗಲು ಶಾಲಾ ವಾರ್ಷಿಕ ಕ್ರೀಡಾಕೂಟ ಸಹಾಯಕ ಎಂದರು. ಗೆಲುವಿಗಿಂತ ಭಾಗವಹಿಸುವ ಮನೋಭಾವನೆ ಮುಖ್ಯ.
ಕ್ರೀಡಾಕೂಟ ಯಶಸ್ಸು ಮತ್ತು ಸಂತೋಷ ಮಕ್ಕಳಿಗೆ ತರಲಿ ಎಂದು ಅಧ್ಯಕ್ಷೀಯ ನುಡಿಯಲ್ಲಿ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುರೇಶ್ ಬೆಟ್ಟೆನ್ ರವರು ತಿಳಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ರವಿಚಂದ್ರ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕ್ ಪ್ರಮುಖ್, ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕಮಲಾಕ್ಷ ಪೈ, ಮುಖ್ಯೋಪಾಧ್ಯಾಯ ಶ್ರೀ ಹರ್ಷಕೊಟೇಶ್ವರ ಹಾಗೂ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀಮತಿ ಶಕೀಲಾ ಎಚ್ ನಿರೂಪಿಸಿ, ಶ್ರೀಮತಿ ಗಾಯತ್ರಿ ಸ್ವಾಗತಿಸಿ, ಶ್ರೀಮತಿ ಸುಜಾತ ಆಚಾರ್ಯ ವಂದಿಸಿದರು.

