ಉಡುಪಿ: ನಾವು ತೆಗೆದುಕೊಂಡ ನಿರ್ಧಾರಗಳೇ ನಮ್ಮ ಭವಿಷ್ಯವನ್ನು ರೂಪಿಸುತ್ತವೆ ,ದ್ವಿತೀಯ ಪಿಯುಸಿಯ ನಂತರ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅದ್ಭುತ ಅವಕಾಶಗಳಿವೆ .ಸಿಎ, ಸಿಎಸ್ ಮುಂತಾದ ವೃತ್ತಿಪರ ಶಿಕ್ಷಣದೊಂದಿಗೆ ಶಿಕ್ಷಣವನ್ನು ಪಡೆಯುವ ಅವಕಾಶಗಳನ್ನು ಯಾವತ್ತೂ ಕಳೆದುಕೊಳ್ಳಬಾರದು. ಸಿಎ, ಸಿಎಸ್ ಎನ್ನುವ ವೃತ್ತಿಪರ ಅವಕಾಶಗಳಿಗೆ ಜಗತ್ತಿನಲ್ಲೇ ಹೆಚ್ಚಿನ ಮಾನ್ಯತೆ ದೊರಕುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮಪಟ್ಟು ಈ ಪದವಿಯನ್ನು ಪಡೆಯುವುದಕ್ಕೆ ಆಸಕ್ತಿ ವಹಿಸಬೇಕು ಎಂದು ಸಿ.ಎ ನಾಗೇಂದ್ರ ಭಕ್ತ ಹೇಳಿದರು. ದ್ವಿತೀಯ ಪಿಯುಸಿ ನಂತರ ವಿದ್ಯಾರ್ಥಿಗಳು ಬಿಸಿಎ ಎನ್ನುವ ಅದ್ಭುತ ತರಗತಿಗಳಿಗೆ ಸೇರಿದರೆ ಅವರ ಯೋಚನೆಯ ವಿಧಾನಗಳ ಜೊತೆ ಉತ್ತಮ ಉದ್ಯೋಗವು ಲಭಿಸುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಬಿಸಿಎ ಪದವಿ ಹೊಂದಿದ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯವಿದೆ ಎಂದು ಪ್ರೊಫೆಸರ್ ನಾರಾಯಣ್ ರಾವ್ ಹೇಳಿದರು .ಇವರು ತ್ರಿಶಾ ವಿದ್ಯಾ ಪಿಯು ಕಾಲೇಜು ಆಯೋಜಿಸಿದ್ದ ಪಿಯುಸಿ ನಂತರ ಮುಂದೇನು ಅನ್ನುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ವಿಘ್ನೇಶ್ ಶೆಣೈ ಮಾತನಾಡಿ ಬಿಕಾಂ ಪದವಿಯ ಅವಕಾಶಗಳು ಮತ್ತು ತ್ರಿಶಾ ಕಾಲೇಜಿನ ವಿಶೇಷತೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹರಿಪ್ರಸಾದ್ , ತ್ರಿಶಾ ಕ್ಲಾಸಸ್ ನ ಮುಖ್ಯಸ್ಥ ಡಾ. ವರದರಾಜ್, ಕಾರ್ಯಕ್ರಮ ಸಂಚಾಲಕಿ ದಿವ್ಯ ನಾಯಕ್, ಶಿಕ್ಷಕ ವೃಂದ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ಕಾರ್ಯಕ್ರಮ ನಿರ್ವಹಿಸಿದರು

