92
ಹೊಸದಿಲ್ಲಿ: ಭಾರತೀಯ ವಾಯುಪಡೆ ಪೈಲಟ್ ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಸಹಿತ ನಾಲ್ವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಗುರುವಾರ ಸಂಜೆ 4.15ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಯಶಸ್ವಿಯಾಗಿ ಡಾಕಿಂಗ್ ಮಾಡಿದ್ದಾರೆ.
ಸಂಜೆ 6.10ಕ್ಕೆ ಕ್ರೂ ಸದಸ್ಯರು ಆರ್ಬಿಟಲ್ ಲ್ಯಾಬ್ ಪ್ರವೇಶಿಸಿದ್ದರು. ಕಮಾಂಡರ್ ಪೆಗ್ಗಿ ವಿಟ್ಸನ್ (ಅಮೆರಿಕ), ಪೈಲಟ್ ಶುಭಾಂಶು ಶುಕ್ಲಾ (ಭಾರತ), ಯೋಜನೆ ತಜ್ಞ ಸ್ಲಾವೊಸ್ ಉಜ್‌ನಾನ್ಸ್‌ಕಿ (ಪೋಲೆಂಡ್), ಯೋಜನೆ ತಜ್ಞ ಟಿಬೋರ್ ಕಾಪು (ಹಂಗೇರಿ) ಅವರನ್ನು ಒಳಗೊಂಡ ಕ್ರೂ ಸದಸ್ಯರು ಯಶಸ್ವಿ ಡಾಕಿಂಗ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ್ದಾರೆ. ಐಎಸ್‌ಎಸ್ ಪ್ರವೇಶಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಶುಭಾಂಶು ಪಾತ್ರರಾಗಿದ್ದಾರೆ

